ಬೈಕ್ ಸವಾರನ ರಕ್ಷಣೆಗೆ ಮುಂದಾದ ಲಾರಿ ಚಾಲಕ ದುರ್ಮರಣ

To save a bike rider: lorry driver died

03-07-2018

ಬೆಂಗಳೂರು: ಕೆಂಗೇರಿ ಬಳಿಯ ಮೈಸೂರು ರಸ್ತೆಯಲ್ಲಿ ಆಯತಪ್ಪಿ ಬೈಕ್‍ನಿಂದ ಬಿದ್ದು ಚರಂಡಿ ಬಳಿ ಗಾಯಗೊಂಡು ಒದ್ದಾಡುತ್ತಿದ್ದ ಸವಾರರ ರಕ್ಷಣೆಗೆ ಲಾರಿ ನಿಲ್ಲಿಸಿ ಹೋದ ಲಾರಿ ಚಾಲಕ ತನಗೆ ಸಂಬಂಧವೇ ಇಲ್ಲದ ಅಪಘಾತಕ್ಕೆ ಬಲಿಯಾಗಿರುವ ಘಟನೆ ನಡೆದಿದೆ.

ರಾಮನಗರದ ಸಿಂಗರಾಜಪುರದ ರಾಘವೇಂದ್ರ (30)ಎಂದು ಮೃತ ಲಾರಿ ಚಾಲಕನನ್ನು ಗುರುತಿಸಲಾಗಿದೆ. ರಾಘವೇಂದ್ರ ಅವರು ಮಧ್ಯರಾತ್ರಿ 2ರ ವೇಳೆ ಮೈಸೂರು ರಸ್ತೆಯ ನೈಸ್ ರಸ್ತೆ ಮೇಲ್ಸೇತುವೆ ಬಳಿ ಲಾರಿ ಚಲಾಯಿಸಿಕೊಂಡು ಹೋಗುತ್ತಿದ್ದರು. ಈ ವೇಳೆ ರಸ್ತೆಯಲ್ಲಿ ಬೈಕ್‍ನಲ್ಲಿ ಹೋಗುತ್ತಿದ್ದ ಇಬ್ಬರು ಆಯತಪ್ಪಿ ಬಿದ್ದು ಗಾಯಗೊಂಡು ಒದ್ದಾಡುತ್ತಿದ್ದರು.

ದೂರದಿಂದ ಅವರನ್ನು ನೋಡಿದ ರಾಘವೇಂದ್ರ ಲಾರಿ ನಿಲ್ಲಿಸಿ ರಕ್ಷಣೆಗಾಗಿ ರಸ್ತೆಯಲ್ಲಿ ಹೋಗುತ್ತಿದ್ದಾಗ ಹಿಂದಿನಿಂದ ಬಂದ ವಾಹನ ಹರಿದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಇತ್ತ ಬೈಕ್ ಅಪಘಾತದಲ್ಲಿ ಗಾಯಗೊಂಡಿದ್ದ ಸವಾರ ಗಿರೀಶ್ ಹಾಗೂ ಹಿಂಬದಿ ಸವಾರ ಅಭಿಷೇಕ್ ಬಿಜಿಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಪ್ರಕರಣ ದಾಖಲಿಸಿರುವ ಕೆಂಗೇರಿ ಸಂಚಾರ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Accident Bike ಲಾರಿ ಚಾಲಕ ಪ್ರಕರಣ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ