ವಾಟ್ಸ್‌ ಆ್ಯಪ್‌ ಕಾಮುಕನಿಗೆ ಬಿತ್ತು ಧರ್ಮದೇಟು

indecent messages in whatsapp group: Boy caught and sent to jail

03-07-2018

ಬೆಂಗಳೂರು: ವಿವಾಹಕ್ಕೆ ಒಪ್ಪದ ಸಹದ್ಯೋಗಿ ಯುವತಿಯೊಬ್ಬಳ ಬಟ್ಟೆ ಹರಿದು ರಸ್ತೆ ಮಧ್ಯೆಯೆ ಗಲಾಟೆ ಮಾಡಿದ ಯುವಕನನ್ನು ಸಹದ್ಯೋಗಿಗಳು ಹಿಡಿದು ಧರ್ಮದೇಟು ನೀಡಿ  ಚಂದ್ರಾ ಲೇಔಟ್ ಪೊಲೀಸರಿಗೆ ಒಪ್ಪಿಸಿದ್ದಾರೆ.

ಸಹೋದ್ಯೋಗಿಗಳು ಹಿಡಿದುಕೊಟ್ಟ ಅರುಣ್‍ನನ್ನು ಬಂಧಿಸಿರುವ ಪೊಲೀಸರು ಜೈಲಿಗೆ ಕಳುಹಿಸಿದ್ದಾರೆ. ರಾಯಲ್ ಹಾಲಿಡೇಸ್ ಇನ್ ಖಾಸಗಿ ಕಂಪನಿಯಲ್ಲಿ  ಕಳೆದ ಎರಡು ತಿಂಗಳ ಹಿಂದೆ ಕೆಲಸಕ್ಕೆ ಸೇರಿಕೊಂಡಿದ್ದ ಅರುಣ್‍ನನ್ನು ಕಂಪನಿಯ ವಾಟ್ಸಾಪ್ ಗ್ರೂಪ್‍ಗೆ ಸೇರಿಸಲಾಗಿತ್ತು. ವಾಟ್ಸಾಪ್ ಗ್ರೂಪ್‍ನಲ್ಲಿ ಅಸಭ್ಯ ಸಂದೇಶಗಳನ್ನು ಕಳುಹಿಸುತ್ತಿದ್ದರಿಂದ ಆತನನ್ನು ಕೆಲಸದಿಂದ ತೆಗೆಯಲಾಗಿತ್ತು.

15 ದಿನಗಳ ಹಿಂದೆ ಕೆಲಸದಿಂದ ಹೊರಬಂದಿದ್ದ ಅರುಣ್ ವಾಟ್ಸಾಪ್ ಗ್ರೂಪ್‍ನಲ್ಲಿ ಮಹಿಳೆಯರಿಗೆ ಅಶ್ಲೀಲ ಸಂದೇಶ ಕಳುಹಿಸಿ ಕಿರುಕುಳ ನೀಡಲು ಶುರುವಿಟ್ಟುಕೊಂಡಿದ್ದ. ಹೀಗಾಗಿ ಸಹದ್ಯೋಗಿಗಳೆಲ್ಲರೂ ಸೇರಿ ಆರೋಪಿ ಅರುಣ್ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ.

ಆದರೂ, ಈತ ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಳ್ಳದೇ ಅಶ್ಲೀಲ ಸಂದೇಶ ಕಳುಹಿಸುವುದನ್ನು ಮುಂದುವರೆಸಿದ್ದ. ಅಲ್ಲದೇ, ಕಂಪನಿಯಿಂದ ಮನೆಗೆ ಹೋಗುತ್ತಿದ್ದ ಯುವತಿಯೊಬ್ಬಳಿಗೆ ಅಶ್ಲೀಲ ಸಂಜ್ಞೆ ಮಾಡುತ್ತಾ ಚುಡಾಯಿಸುತ್ತಿದ್ದ ಎಂದು ತಿಳಿದುಬಂದಿದೆ.

ಪ್ರತಿದಿನ ಬೈಕ್ ಮೂಲಕ ಯುವತಿಯನ್ನು ಹಿಂಬಾಲಿಸಿ ಬಸ್ ನಿಲ್ದಾಣದ ಕಡೆಗೆ ನಡೆದು ಹೋಗುತ್ತಿದ್ದ ಯುವತಿಗೆ ಮದುವೆಯಾಗುವಂತೆ ಒತ್ತಾಯಿಸಿದ್ದ. ಇದಕ್ಕೆ ಯುವತಿ ಪ್ರತಿರೋಧ ತೋರಿದಾಗ ನಡುರಸ್ತೆಯಲ್ಲಿಯೇ ಆಕೆಯ ಬಟ್ಟೆ ಹರಿದು ಅರುಣ್ ದುಷ್ಕೃತ್ಯ ಎಸಗಿದ್ದಾನೆ. ಈ ವೇಳೆ ಕಂಪನಿ ಸಹದ್ಯೋಗಿಗಳು ಆರೋಪಿಗೆ ಹಿಗ್ಗಾಮುಗ್ಗ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಸಂಬಂಧ ಚಂದ್ರಾ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಸಂಬಂಧಿತ ಟ್ಯಾಗ್ಗಳು

watsapp harassment ದುಷ್ಕೃತ್ಯ ಸಹೋದ್ಯೋಗಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ