ಆಸ್ಪತ್ರೆಯೊಂದರ ಪರವಾನಗಿ ರದ್ದುಪಡಿಸಿದ ಡಿಎಚ್ಒ

Davanagere DHO canceled licence of a hospital t davanagere

03-07-2018

ದಾವಣಗೆರೆ: ಖಾಸಗಿ ಕ್ಲಿನಿಕ್ ಗಳ ಮೇಲೆ ಆರೋಗ್ಯ ಅಧಿಕಾರಿಗಳು ದಾಳಿ ಮಾಡಿದ್ದು, ಹಲವು ಕ್ಲಿನಿಕ್ ಗಳನ್ನು ಸೀಜ್ ಮಾಡಿ, ಆಸ್ಪತ್ರೆಯೊಂದರ ಪರವಾನಗಿಯನ್ನೂ ರದ್ದು ಪಡಿಸಿದ್ದಾರೆ. ಡಿಹೆಚ್ಒ ತ್ರಿಪುಲಾಂಭಾ, ನರ್ಸಿಂಗ್ ಹೋಂ ಅಸೋಸಿಯೇಷನ್ ಅಧ್ಯಕ್ಷ ನಾಗಪ್ರಕಾಶ್ ನೇತೃತ್ವದಲ್ಲಿ ದಾಳಿ ಮಾಡಿದ್ದಾರೆ. ದಾವಣಗೆರೆಯಲ್ಲಿ ಮೆಡಿಕಲ್ ವೇಸ್ಟ್ ಅನ್ನು ಅವೈಜ್ಞಾನಿಕವಾಗಿ ಬೇರ್ಪಡಿಸುತ್ತಿರುವ ಹಿನ್ನೆಲೆ ಹಲವಾರು ದೂರುಗಳು ಬಂದಿದ್ದು, ರಸ್ತೆಗಳ ಪಕ್ಕದಲ್ಲಿ ರಾಶಿಗಟ್ಟಲೆ ಮೆಡಿಕಲ್ ವೇಸ್ಟ್ ಕಂಡುಬಂದಿತ್ತು. ನಗರದ ಪಿ.ಜೆ.ಬಡಾವಣೆಯಲ್ಲಿರುವ ಎಸ್.ಆರ್.ಎಲ್ ಡಯಾಗ್ನಸ್ಟಿಕ್ ಸೆಂಟರ್ ಸೇರಿದಂತೆ ವಿವಿಧ ಕ್ಲಿನಿಕ್ ಗಳ ಮೇಲೆ ದಾಳಿ ಮಾಡಿದ್ದಾರೆ. ಈ ವೇಳೆ ದಾಖಲೆಗಳು ಸರಿ ಇಲ್ಲದ, ಅವೈಜ್ಞಾನಿಕವಾಗಿ ಮೆಡಿಕಲ್ ವೇಸ್ಟ್ ಅನ್ನು ಬೇರ್ಪಡಿಸುತ್ತಿರುವ, ಅವ್ಯವಸ್ಥೆಯಿಂದ ಕೂಡಿರುವ ಆಸ್ಪತ್ರೆಗಳು ಕಂಡುಬಂದಿವೆ. ನಗರದ ಗುರುಶ್ರೀ ಆಸ್ಪತ್ರೆಯ ಪರವಾನಗಿ ರದ್ದು ಮಾಡಿ ಆದೇಶಿದ್ದಾರೆ ಡಿಹೆಚ್ಒ. ಅಲ್ಲದೆ ಅವ್ಯವಸ್ಥೆಯಿಂದ ಕೂಡಿದ ಕ್ಲಿನಿಕ್ ಗಳನ್ನು ಸೀಜ್ ಮಾಡಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ