ಭೋಜೇಗೌಡರ ವರ್ತನೆಗೆ ಹಂಗಾಮಿ ಸಭಾಪತಿ ಹೊರಟ್ಟಿ ಗರಂ!

vidhan parishad session: Provisional Speaker horatii garam!

03-07-2018

ಬೆಂಗಳೂರು: ವಿಧಾನ ಪರಿಷತ್ ಕಲಾಪದ ವೇಳೆ ಪದೇ ಪದೇ ಕಲಾಪದಲ್ಲಿ ಬೇರೆಯವರ ಚರ್ಚೆಯಲ್ಲಿ ಮಧ್ಯ ಪ್ರವೇಶಿಸುತ್ತಿದ್ದ ಜೆಡಿಎಸ್ ಸದಸ್ಯ ಭೋಜೇಗೌಡರನ್ನು ಸುಮ್ಮನಿರಿಸಿ ಘಟನೆ ನಡೆಯಿತು. ಬೇರೆಯವರ ಚರ್ಚೆಯ ಮಧ್ಯದಲ್ಲಿ ಮಾತನಾಡುತ್ತಿದ್ದ ಭೋಜೇಗೌಡರ ವರ್ತನೆಗೆ ಹಂಗಾಮಿ ಸಭಾಪತಿ ಬಸವರಾಜ ಹೊರಟ್ಟಿ ಅವರು ಗರಂ ಆದರು. ಇವರ ವರ್ತನೆಗೆ ‘ಇವಾಗ್ಲೆ  ಬಂದಿದ್ದೀರಾ ಎಷ್ಟು ಮಾತ್ನಾಡ್ತಿರಾ ನೀವು. ಮುಂದೆ ಮಾತ್ನಾಡೋದು ಇದ್ದೇ ಇದೆ. ಇನ್ನಿತರೇ ಸದಸ್ಯರು ಏನು ಚರ್ಚೆ ಮಾಡ್ತಿದ್ದಾರೆ ಅನ್ನೋದು ಕೇಳಿ’ ಎಂದು ತಾಕಿತು ಮಾಡಿದರು. ಸಭಾಪತಿ ಹೊರಟ್ಟಿ ಮಾತಿಗೆ ತಣ್ಣಗಾದ ನೂತನ ಜೆಡಿಎಸ್ ಸದಸ್ಯ ಭೋಜೇಗೌಡರು ತಮ್ಮ ಸ್ಥಳದಲ್ಲಿ ಗಪ್ ಚುಪ್ ಆಗಿ ಆಸೀನರಾದರು.


ಸಂಬಂಧಿತ ಟ್ಯಾಗ್ಗಳು

basavaraj horatti Bhojegwda jds ಕಲಾಪ ಸದಸ್ಯ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ