ಯಾತ್ರಾರ್ಥಿಗಳ ಸಂಬಂಧಿಕರು ಭಯಪಡುವ ಅಗತ್ಯವಿಲ್ಲ: ಮೈಸೂರು ಡಿಸಿ

Relatives of pilgrims do not need to be afraid: Mysore DC

03-07-2018

ಮೈಸೂರು: ರಾಜ್ಯದಿಂದ ಮಾನಸ ಸರೋವರ ಯಾತ್ರೆಗೆ ತೆರಳಿದ್ದ ಯಾತ್ರಾರ್ಥಿಗಳು ಸಂಕಷ್ಟಕ್ಕೆ ಸಿಲುಕಿರುವ ಹಿನ್ನೆಲೆ, ಪ್ರತಿಕ್ರಿಯಿಸಿರುವ ಮೈಸೂರು ಜಿಲ್ಲಾಧಿಕಾರಿ ಅಭಿರಾಮ್ ಜಿ ಶಂಕರ್‌ ಅವರು, ಯಾತ್ರಿಗಳ ಸಂಬಂಧಿಕರು ಭಯಪಡುವ ಅಗತ್ಯವಿಲ್ಲ. ಯಾತ್ರಿಗಳ ನೆರವಿಗಾಗಿ ನೇಪಾಳ ರಾಯಭಾರಿ ಕಚೇರಿ ಜೊತೆ ಮಾತುಕತೆ ನಡೆಸಿದ್ದೇವೆ. ಸಿಮಿಕೋಟ್, ಹಿರಾ ಎಂಬ ಎರಡು ಕಡೆ ಯಾತ್ರಿಗಳಿದ್ದಾರೆ. 500 ಜನರಂತೆ ಎರಡು ಗುಂಪುಗಳಾಗಿ ಅವರನ್ನ ವಿಂಗಡಿಸಲಾಗಿದೆ. ಈಗಾಗಲೇ ಸಾವಿರ ಯಾತ್ರಿಗಳು ಅಲ್ಲಿ ಇದ್ದಾರೆ. ಅವರನ್ನ ರಕ್ಷಣೆ ಮಾಡಿ, ಊಟ ನೀರು ಸೇರಿದಂತೆ ಚಿಕಿತ್ಸೆ ವ್ಯವಸ್ಥೆ ಮಾಡಲಾಗಿದೆ ಎಂದರು.

ಈಗಾಗಲೇ ಹಾಟ್‌ಲೈನ್ ಸೇವೆ ತೆರೆಯಲಾಗಿದೆ. ಯಾವುದೇ ಸಂದರ್ಭದಲ್ಲಿ ಸಂಬಂಧಿಕರು ಸೂಚನಾ ಫಲಕದಲ್ಲಿ ನೀಡಿರುವ ಸಂಖ್ಯೆಗೆ ಕರೆ ಮಾಡಿ ಮಾಹಿತಿ ಪಡೆಯಬಹುದು. ಇದನ್ನ ಈಗಾಗಲೇ ಮಾಧ್ಯಮ ಸೇರಿದಂತೆ ವಾಟ್ಸ್ ಅಪ್ ಮೂಲಕ ಶೇರ್ ಮಾಡಿದ್ದೇವೆ. ತಮ್ಮ ಸಂಬಂಧಿಕರು ಮಿಸ್ ಆಗಿದ್ದಾರೆಂದು ದೂರು ಬಂದಲ್ಲಿ, ಮಾಧ್ಯಮದವರು ಕೂಡ ಈ ನಂಬರ್‌ಗಳನ್ನ ಪ್ರಚಾರ ಮಾಡಿ. ಸಂಬಂಧಿಕರಿಗೆ ಸಮಸ್ಯೆಯಾಗದಂತೆ ಯಾತ್ರಿಗಳ ಜೊತೆ ಮಾತಾಡಲು ಅವಕಾಶ ಮಾಡಿಕೊಡಲಾಗಿದೆ. ಎನ್‌ಡಿಆರ್‌ಎಫ್ ತಂಡದ ಮುಖ್ಯಸ್ಥರ ಜೊತೆಯೂ ನಾವು ಸಂಪರ್ಕದಲ್ಲಿದ್ದೇವೆ, ಎಲ್ಲಾ ರೀತಿಯ ಸೂಕ್ತ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ತಿಳಿಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ