‘ರಾಜ್ಯಾದ್ಯಂತ ಪೊಲೀಸ್ ಆಯುಕ್ತರ ಕಚೇರಿಗಳಲ್ಲಿ ನಿರ್ಭಯಾ ಕೇಂದ್ರಗಳು’

Nirbhaya centers in every police commissioner office

02-07-2018

ಬೆಂಗಳೂರು: ಪೊಲೀಸ್ ಇಲಾಖೆಯಲ್ಲಿ ಮಹಿಳಾ ಪ್ರಾತಿನಿಧ್ಯವನ್ನು ಹೆಚ್ಚಿಸಿ ಬೆಂಗಳೂರು ಸೇರಿ ರಾಜ್ಯದ ಎಲ್ಲಾ ಪೊಲೀಸ್ ಆಯುಕ್ತರ ಕಚೇರಿಗಳಲ್ಲಿ ನಿರ್ಭಯಾ ಕೇಂದ್ರಗಳನ್ನು ಸ್ಥಾಪಿಸಲಾಗುವುದು ಎಂದು ರಾಜ್ಯಪಾಲ ವಜು ಭಾಯಿ ವಾಲಾ ತಿಳಿಸಿದ್ದಾರೆ.

ಮುಂದಿನ ವರ್ಷಗಳಲ್ಲಿ ಪೊಲೀಸ್ ತರಬೇತಿ ಸಾಮರ್ಥ್ಯವನ್ನು ಮತ್ತಷ್ಟು ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುವುದು ಸೈಬರ್ ವಿಧಿವಿಜ್ಞಾನ ಪ್ರಯೋಗಾಲಯಗಳನ್ನು ಸ್ಥಾಪಿಸುವುದು ಮಾಹಿತಿ ತಂತ್ರಜ್ಞಾನ ಜಾಲವನ್ನು ಬಲಪಡಿಸುವುದಲ್ಲದೇ ಬ್ರಾಡ್‍ ಬ್ಯಾಂಡ್ ಸಂಪರ್ಕಜಾಲದ ದಕ್ಷತೆಯನ್ನು ವೃದ್ಧಿಸಿ ಸೈಬರ್ ಅಪರಾಧಗಳನ್ನು ಹತ್ತಿಕ್ಕಲು ಶ್ರಮಿಸಲಾಗುವುದು ಎಂದು ಹೇಳಿದರು.

ವಿಧಾನಮಂಡಲದ ಜಂಟಿ ಅಧಿವೇಶವವನ್ನು ಉದ್ದೇಶಿಸಿ ಭಾಷಣ ಮಾಡಿದ ಅವರು ರಾಜ್ಯದ ಪ್ರತಿ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಒಂದೊಂದು ಭೌಗೊಳಿಕ ಸರಹದ್ದು ನಿಗದಿಪಡಿಸಿ ಎಲ್ಲಾ ಮುಖ್ಯಪೇದೆ ಹಾಗೂ ಪೇದೆಗಳಿಗೆ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದರು.

ಯುದ್ಧದಲ್ಲಿ ಮಡಿದ ಸೈನಿಕರ ಅವಲಂಬಿತರಿಗೆ ಹಾಗೂ ಗಾಯಾಳು ಸೈನಿಕರಿಗೆ ಮನೆ ಮತ್ತು ಎಕ್ಸ್ಗ್ರೇಷಿಯಾ ಪರಿಹಾರಕ್ಕೆ ಬದಲಾಗಿ ಆರ್ಥಿಕ ನೆರವನ್ನು ಹಂಚಿಕೆ ಮಾಡಲಾಗಿದ್ದು ನಿವೃತ್ತಿ ನಂತರ ಪುನರ್ವಸತಿ ಒದಗಿಸಲು ರಾಜ್ಯದಲ್ಲಿನ ಎಲ್ಲಾ ಮಾಜಿ ಸೈನಿಕರ ದತ್ತಾಂಶವನ್ನು ಕೌಶಲಾಭಿವೃದ್ಧಿ ಇಲಾಖೆಯೊಂದಿಗೆ ಜೋಡಣೆ ಮಾಡಲಾಗುವುದು ಎಂದರು.


ಸಂಬಂಧಿತ ಟ್ಯಾಗ್ಗಳು

Nirbhaya Vajubhai Vala ಕೌಶಲಾಭಿವೃದ್ಧಿ ಆರ್ಥಿಕ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ