ಇದ್ದಕ್ಕಿಂದ್ದಂತೆ ಹೊತ್ತಿ ಉರಿದ ಕಾರು: ಪ್ರಯಾಣಿಕರು ಬಚಾವ್

suddenly fire in a car: passengers escaped

02-07-2018

ಬಾಗಲಕೋಟೆ: ಚಲಿಸುತ್ತಿದ್ದ ಕಾರಿಗೆ ಆಕಸ್ಮಿಕ ಬೆಂಕಿ ತಗುಲಿ ಧಗಧಗನೆ ಹೊತ್ತಿ ಉರಿದಿದೆ. ಜಿಲ್ಲೆಯ ರಬಕವಿ ಬಸ್ ನಿಲ್ದಾಣದ ಬಳಿ ಘಟನೆ ನಡೆದಿದೆ. ಅದೃಷ್ಟವಶಾತ್ ಕಾರಿನಲ್ಲಿದ್ದ ಪ್ರಯಾಣಿಕರು ಯಾವುದೇ ಗಾಯಗಳಾಗದೇ ಪಾರಾಗಿದ್ದಾರೆ. ರಫಿಕ್ ಇನಾಮದಾರ್ ಎಂಬುವರಿಗೆ ಸೇರಿದ್ದ ಕಾರಿನಲ್ಲಿ ತೇರದಾಳ ಪಟ್ಟಣದಿಂದ ಜಮಖಂಡಿ ಹೊರಡುವ ವೇಳೆ ರಸ್ತೆ ಮಧ್ಯೆ ಇದ್ದಕ್ಕಿದ್ದಂತೆ ಬೆಂಕಿ ಹೊತ್ತಿಕೊಂಡಿದೆ. ಬೆಂಕಿ ಆವರಿಸುತ್ತಿದ್ದಂತೆ ಏಕಾಏಕಿ ಕಾರು ನಿಲ್ಲಿಸಿ, ಕಾರಿನಿಂದ ಇಳಿದಿದ್ದು ಅಪಾಯದಿಂದ ಪಾರಾಗಿದ್ದಾರೆ. ನೋಡ ನೋಡುತ್ತಿದ್ದಂತೆ ಕಾರು ಹೊತ್ತಿ ಉರಿದು ಸುಟ್ಟು ಕರಕಲಾಗಿದೆ. ಬನಹಟ್ಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

 


ಸಂಬಂಧಿತ ಟ್ಯಾಗ್ಗಳು

Fire Car ರಬಕವಿ ಏಕಾಏಕಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ