ದಲಿತರ ಕೇರಿಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಆಕ್ಷೇಪ !

Kannada News

27-05-2017 433

ಕೊಪ್ಪಳ:- ದಲಿತರ ಕೇರಿಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಆರಂಭವಾದ ಹಿನ್ನೆಲೆ, ಸವರ್ಣೀಯರಿಂದ ಶುದ್ಧ ಕುಡಿಯುವ ನೀರಿನ ಘಟಕದ ಪೈಪ್ ಒಡೆದು  ಬೀಗ ಹಾಕಿದ  ಘಟನೆ ಗಂಗಾವತಿ ತಾಲ್ಲೂಕಿನ ಜೀರಾಳ ಕಲ್ಗುಡಿ ಗ್ರಾಮದಲ್ಲಿ ನಡೆದಿದೆ. ಗಂಗಾವತಿ ತಾಲ್ಲೂಕಿನ  ಜೀರಾಳದಲ್ಲಿ ನಿನ್ನೆ ರಾತ್ರಿ ಏಕಾಏಕಿ 25 ಜನ ಸವರ್ಣೀಯರಿಂದ ದಲಿತ ಕೇರಿಗೆ ದಾಳಿ ಮಾಡಿದ್ದು, ಇಬ್ಬರು ದಲಿತ ಯುವಕರ ಮೇಲೆ ಹಲ್ಲೆ ನಡೆಸಿದ್ದಾರೆ. ನಂತರ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಬೀಗ ಹಾಕಿದ್ದಾರೆ. ಗ್ರಾ.ಪಂ ಸದಸ್ಯರಾದ ಮಂಜುನಾಥ್, ವೀರುಪಾಕ್ಣಗೌಡ ಸೇರಿದಂತೆ ಇತರೆ 25 ಜನ ಸವರ್ಣೀಯರು ದಲಿತರ ಮೇಲೆ ದೌರ್ಜನ್ಯ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಕಳೆದ 8 ದಿನಗಳ ಹಿಂದೆ ದಲಿತ ಕೇರಿಯಲ್ಲಿ ಆರಂಭವಾಗಿರುವ ಶುದ್ಧ ಕುಡಿಯುವ ನೀರಿನ ಘಟಕದಲ್ಲಿ ನೀರು ತುಂಬಲು ಸವರ್ಣೀಯರು ಆಕ್ಷೇಪಮಾಡುತ್ತಿದ್ದರು, ಇದೀಗ ಘಟಕಕ್ಕೆ ಬೀಗ ಜಡಿದು ಅಮಾನವೀಯತೆ ತೋರಿದ್ದಾರೆ.


ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ