ಗುದ್ದಲಿ ಪೂಜೆ ವೇಳೆ ಅರ್ಚಕನಿಗೆ ಸಚಿವ ರೇವಣ್ಣರಿಂದ ಕ್ಲಾಸ್!

02-07-2018
ಹಾಸನ: ವೈದ್ಯಕೀಯ ವಿದ್ಯಾರ್ಥಿನಿಯರ ಹಾಸ್ಟೆಲ್ ಕಾಮಗಾರಿಗೆ ಶಂಕು ಸ್ಥಾಪನೆ ಮಾಡುವ ವೇಳೆ, ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣ ಅವರು ಅರ್ಚಕರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಶಾಸ್ತ್ರ, ಸಂಪ್ರದಾಯ, ವಾಸ್ತುವನ್ನು ಅತಿಯಾಗಿ ನಂಬುವ ರೇವಣ್ಣ ಅವರು, ವಾಸ್ತು ಪ್ರಕಾರ ಪೂಜೆ ಮಾಡದ ಹಿನ್ನೆಲೆ ಅರ್ಚಕರ ವಿರುದ್ಧ ರೇಗಾಡಿದ್ದು, 'ಯಾರ್ರೀ ಈ ಅರ್ಚಕರನ್ನು ಕರೆಸಿದ್ದು. ಗುದ್ದಲಿ ಪೊಜೆ ವೇಳೆ ಯಾವ ದಿಕ್ಕಿಗೆ ಪಾಯ ತೆಗೆಸಬೇಕು ಎಂಬುದೇ ಇವರಿಗೆ ಗೊತ್ತಿಲ್ಲ’ ಎಂದು ಗರಂ ಆಗಿದ್ದಾರೆ. 'ಅನುಭವಿ ಅರ್ಚಕರನ್ನು ಕರೆಸುವುದನ್ನು ಬಿಟ್ಟು ಇವರನ್ನು ಯಾಕ್ರೀ ಕರೆಸಿದ್ದೀರಿ' ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಕೊನೆಗೆ ಗುದ್ದಲಿ ಪೊಜೆ ಮಾಡುವ ದಿಕ್ಕನ್ನು ಬದಲಿಸಿದರು ಸಚಿವ ರೇವಣ್ಣ.
ಒಂದು ಕಮೆಂಟನ್ನು ಹಾಕಿ