ಸವದಿ ಭಾಷಣಕ್ಕೆ ತುಟಿಕ್ ಪಿಟಿಕ್ ಎನ್ನದ ಬಿಜೆಪಿ ನಾಯಕರು!

BJP leader laxman Savadi also indirectly talked about Anant Kumar Hegde!

30-06-2018

ಬೆಂಗಳೂರು: ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ರಾಜ್ಯ ರೈತ ಮೋರ್ಚಾ ಅಧ್ಯಕ್ಷ ಲಕ್ಷ್ಮಣ ಸವದಿ, ‘ನಮ್ಮ ಪಕ್ಷದ ಕೆಲ ನಾಯಕರು ಬಾಯಿಗೆ ಬೀಗ ಹಾಕಿಕೊಳ್ಳಬೇಕಿದೆ ಎಂದು ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ವಿರುದ್ಧ ವಗ್ದಾಳಿ ನಡೆಸಿದ್ದಾರೆ. ನಾಲ್ಕು ಗೋಡೆ ಮಧ್ಯೆ ಹೇಳ ಬೇಕಾಗಿರುವುದು ಬಹಳ ಇದೆ. ಹೀಗಾಗಿಯೇ ನೀವೆ ಬಾಯಿಗೆ ಸ್ವಯಂ ನಿಯಂತ್ರಣ ಹಾಕಿಕೊಳ್ಳಿ' ಎಂದು ಸಲಹೆ ನೀಡಿದರು. 'ನಮ್ಮ ಕೆಲ ನಾಯಕರ ಹೇಳಿಕೆಯಿಂದಲೇ ನಾವು 120 ಸೀಟ್ ಗೆಲ್ಲುವ ಅವಕಾಶ ಕೈತಪ್ಪಿತು. ನಾನು ಈಗಾಗಲೇ ನಮ್ಮ‌ ಕೆಲ ನಾಯಕರ ಗಮನಕ್ಕೆ ತಂದಿದ್ದೇನೆ. ಈಗ ಈ ಸಭೆಯಲ್ಲಿ ಹೇಳಿದರೆ ಮತ್ತೊಂದು ವಿವಾದ ಆಗಬಹುದು, ಹೀಗಾಗಿ ಇಲ್ಲಿ ಎಲ್ಲವನ್ನೂ ಮಾತಾಡಲ್ಲ' ಎಂದರು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಸಚಿವ ಅನಂತ್ ಕುಮಾರ್ ವೇದಿಕೆಯಲ್ಲಿ ಇರುವಾಗಲೇ ಆಕ್ರೋಶದಿಂದ ಭಾಷಣ ಮಾಡಿದರೂ, ಲಕ್ಷ್ಮಣ ಸವದಿ ಭಾಷಣಕ್ಕೆ ತುಟಕ್ ಪಿಟಕ್ ಎನ್ನಲಿಲ್ಲ ನಾಯಕರು.


ಸಂಬಂಧಿತ ಟ್ಯಾಗ್ಗಳು

Laxman Savadi Anant Kumar Hegde ರಾಜ್ಯಾಧ್ಯಕ್ಷ ಭಾಷಣ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ