ರೈತರ ಸಾಲಮನ್ನಾ: ಕೋಡಿಹಳ್ಳಿ ಚಂದ್ರಶೇಖರ್ ಸಲಹೆ

Farmers Loans: farmers leader Kodihalli Chandrashekar Advice

30-06-2018

ಬೆಳಗಾವಿ: ರೈತರ‌ ಸಾಲಮನ್ನಾ ವಿಚಾರವಾಗಿ ಸಮ್ಮಿಶ್ರ ‌ಸರ್ಕಾರದಲ್ಲಿ ಭಿನ್ನರಾಗ ಕೇಳಿಬರುತ್ತಿದೆ. ರಾಜ್ಯ ರೈತರು ಬಜೆಟ್ ಕುರಿತು ಬಹಳ ನಿರೀಕ್ಷೆಗಳನ್ನಿಟ್ಟುಕೊಂಡು ಕಾಯುತ್ತಿದ್ದಾರೆ ಎಂದು ‌ರೈತ ಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ‌ಹೇಳಿದ್ದಾರೆ. ಬೆಳಗಾವಿಯಲ್ಲಿ ಮಾತನಾಡಿದ ಅವರು, ಸಾಲಮನ್ನಾ ವಿಚಾರವಾಗಿ ಆರ್ಥಿಕ ತಜ್ಞರು ಅಭಿಪ್ರಾಯ ಬದಲಾಯಿಸುವ ಮಾತುಗಳನ್ನಾಡುತ್ತಿದ್ದಾರೆ. ಸಾಲ ಮನ್ನಾವನ್ನು ವೈಜ್ಞಾನಿಕ ತಳಹದಿ ಮೇಲೆ ನಿಂತು ಯೋಚನೆ ಮಾಡಿ ಎಂದು ಸಲಹೆ ನೀಡಿದರು. ರೈತರ ಸಮಾಧಾನಕ್ಕೆ ಮಾತ್ರ ಸಾಲಮನ್ನಾ ಆಗಬಾರದು. ಸಾಲಮನ್ನಾ ಆಹಾರ ಉತ್ಪಾದನೆ ಕ್ಷೇತ್ರಕ್ಕೆ ನೀಡುವ ಉತ್ತೇಜನ ಆಗಬೇಕು ಎಂದರು.

ರಾಜ್ಯದಲ್ಲಿ ಕಬ್ಬು ಬೆಳೆಗಾರರು ಸಂಕಷ್ಟದಲ್ಲಿದ್ದಾರೆ, ಕೇಂದ್ರ ಸರ್ಕಾರ ಮಧ್ಯ ಪ್ರವೇಶ ಮಾಡಬೇಕು ಮತ್ತು ಕಬ್ಬು ಬೆಳೆಗಾರರ ಹಿತ ಕಾಯಬೇಕು ಎಂದು ಆಗ್ರಹಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Kodihalli chandra sh Farmers ಆರ್ಥಿಕ ತಜ್ಞ ಅಭಿಪ್ರಾಯ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ