ಎಟಿಎಂ ದರೋಡೆಗೆ ಯತ್ನ: ಪೊಲೀಸರನ್ನು ಕಂಡು ಕಳ್ಳರು ಪರಾರಿ

ATM robbery: thieves escaped!

30-06-2018

ವಿಜಯಪುರ: ಎಟಿಎಂ ಕಳ್ಳತನಕ್ಕೆ ಯತ್ನಿಸುತ್ತಿದ್ದ ಖದೀಮರು ಪೊಲೀಸರನ್ನು ಕಂಡು ಪರಾರಿಯಾಗಿದ್ದಾರೆ. ನಗರದ ಬಾಗಲಕೋಟೆ ರಸ್ತೆಯಲ್ಲಿರುವ ಐಸಿಐಸಿಐ ಬ್ಯಾಂಕ್ ಗೆ ಸೇರಿದ ಎಟಿಎಂ ಕಳ್ಳತನಕ್ಕೆ ಯತ್ನಿಸಿದ್ದಾರೆ. ನಸುಕಿನ ಜಾವ 4ಗಂಟೆ ಸುಮಾರಿನಲ್ಲಿ ಘಟನೆ ನಡೆದಿದೆ.

ನಾಲ್ವರು ಕಳ್ಳರು ಗ್ಯಾಸ್ ಹಾಗೂ ಕಟರ್ ಗಳನ್ನು ಬಳಸಿ ಎಟಿಎಂ ಮೆಷಿನ್ ಅನ್ನು ದೋಚಲು ಯತ್ನಿಸುತ್ತಿದ್ದರು. ರಾತ್ರಿ ಗಸ್ತು ತಿರುಗುತ್ತಿದ್ದ ಗಾಂಧಿ ಚೌಕ್ ಠಾಣೆಯ ಎಎಸೈ ಪ್ರೇಮಾ ಕೂಚಬಾಳ ಅವರ ಪೊಲೀಸ್ ವಾಹನ ಅದೇ ಮಾರ್ಗವಾಗಿ ಬರುತ್ತಿದ್ದು, ಪೊಲೀಸರನ್ನು ಕಂಡು ಪರಾರಿಯಾಗಿದ್ದಾರೆ. ಕೃತ್ಯಕ್ಕೆ ಬಳಸಿರುವ ವಸ್ತುಗಳನ್ನು ಸ್ಥಳದಲ್ಲೇ ಬಿಟ್ಟು ಕಾಲ್ಕಿತ್ತಿದ್ದಾರೆ. ಕೆಎಂ32 ಎಂ 4527 ನಂಬರಿನ ಕಾರಿನಲ್ಲಿ ಪರಾರಿಯಾಗಿದ್ದಾರೆ ಖದೀಮರು.

ಪೊಲೀಸರು ಸಹ ಖದೀಮರ ಬೆನ್ನತ್ತಿದರಾದರೂ ತಪ್ಪಿಸಿಕೊಂಡಿದ್ದಾರೆ. ಸದ್ಯ ಐಸಿಐಸಿಐ ಎಟಿಎಂನಲ್ಲಿನ ಹಣ ಸೇಫ್ ಆಗಿದೆ. ಪೊಲೀಸರ ಕರ್ತವ್ಯ ಪ್ರಜ್ಞೆಯಿಂದ ಎಟಿಎಂ ಕಳ್ಳತನ ತಪ್ಪಿದೆ. ಗಾಂಧಿ ಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಕಳ್ಳರಿಗಾಗಿ ಹುಡುಕಾಟ ನಡೆಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Bank ATM ಐಸಿಐಸಿಐ ಪರಾರಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ