ಮಂಡ್ಯ ಲೋಕಸಭಾ ಉಪಚುನಾವಣೆ: ಟಿಕೆಟ್ ಗಾಗಿ ಭಾರೀ ಪೈಪೋಟಿ

Mandya lok sabha by election: many aspirants from BJP

30-06-2018

ಮಂಡ್ಯ: ಮಂಡ್ಯ ಲೋಕಸಭೆ ಸ್ಥಾನಕ್ಕಾಗಿ ಬಿಜೆಪಿಯಲ್ಲಿ ಪೈಪೋಟಿ ಹೆಚ್ಚಾಗಿದೆ. ಉಪ ಚುನಾವಣೆಗಾಗಿ ಯುವ ಸ್ಪರ್ಧಾಕಾಂಕ್ಷಿಗಳು, ಪಕ್ಷದ ಪ್ರಮುಖ ಮುಖಂಡರು ಸೇರಿದಂತೆ ಹಲವರು ಟಿಕೆಟ್ ಗಾಗಿ ಪಕ್ಷದ ವರಿಷ್ಠರ ದುಂಬಾಲು ಬಿದ್ದಿದ್ದಾರೆ.

ಮಾಜಿ ಉಪ ಮುಖ್ಯ ಮಂತ್ರಿ ಆರ್.ಅಶೋಕ್ ಕಣಕ್ಕಿಳಿಸಲು ಹೈ ಕಮಾಂಡ್ ಮಟ್ಟದಲ್ಲಿ ಚರ್ಚೆಗಳು ನಡೆಯುತ್ತಿವೆ. ಒಂದು ವೇಳೆ ಅಶೋಕ್ ಅವರು ಟಿಕೆಟ್ ನಿರಾಕರಿಸಿದರೆ ತಮಗೆ ಟಿಕೆಟ್ ನೀಡುವಂತೆ ಹಲವರು ಪಟ್ಟು ಹಿಡಿದಿದ್ದಾರೆ. ಈ ಪಟ್ಟಿಯಲ್ಲಿ ಕೆಎಸ್ಒಯು ನ ದಾವಣಗೆರೆ ಪ್ರಾದೇಶಿಕ ನಿರ್ದೇಶಕ ಡಾ.ಸುಧಾಕರ ಹೊಸಳ್ಳಿ, ಮಂಡ್ಯ ಭಜರಂಗದಳದ ಜಿಲ್ಲಾಧ್ಯಕ್ಷ ಮಂಜುನಾಥ್, ಹಾಗೂ ನಿಮಿಷಾಂಬ ದೇವಾಲಯದ ಪ್ರಮುಖ ಅರ್ಚಕ ಎಂ.ಕೆ.ಭಟ್ ಸ್ಪರ್ಧೆಯ ರೇಸ್ ನಲ್ಲಿದ್ದಾರೆ. ಇದಲ್ಲದೆ ರಾಜ್ಯದ ಮಟ್ಟದ ಹಲವು ನಾಯಕರೊಂದಿಗೆ ಟಿಕೆಟ್ ಗಾಗಿ ಹೊಸಮುಖಗಳು ಲಾಬಿ ನಡೆಸುತ್ತಿದ್ದಾರೆ. ಆದರೆ ಬಿಜೆಪಿ ಹೈಕಮಾಂಡ್ ಮಾತ್ರ ಜೆಡಿಎಸ್ ನ ಅಭ್ಯರ್ಥಿ ಯಾರಾಗುತ್ತಾರೆ ಅನ್ನೋದರ ಮೇಲೆ ತಮ್ಮ ಪಕ್ಷದ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಚಿಂತನೆ ನಡೆಸಿದೆ.

 


ಸಂಬಂಧಿತ ಟ್ಯಾಗ್ಗಳು

By Election Mandya ಉಪ ಮುಖ್ಯಮಂತ್ರಿ ಆರ್.ಅಶೋಕ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ