ಬಜೆಟ್ ಮಂಡನೆಯಾಗಲಿದೆ ಸಂಶಯ ಬೇಡ: ನಾಡಗೌಡ

on July 5th is budget : said minister venkata rao nadagouda

29-06-2018

ಹುಬ್ಬಳ್ಳಿ: ಬಜೆಟ್ ಮಂಡನೆಗೆ ಯಾವುದೇ ವಿರೋಧ ಇಲ್ಲ. ಜುಲೈ 5ರಂದು ಬಜೆಟ್ ಮಂಡನೆಯಾಗಲಿದೆ. ಈ ಕುರಿತು ಯಾವುದೇ ಸಂಶಯಬೇಡ ಎಂದು ಹುಬ್ಬಳ್ಳಿಯಲ್ಲಿ ಪಶುಸಂಗೋಪನಾ ಸಚಿವ ವೆಂಕಟರಾವ್ ನಾಡಗೌಡ ಹೇಳಿದ್ದಾರೆ.

ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಬಜೆಟ್ ಗೆ ಸಿದ್ದರಾಮಯ್ಯ ಸಲಹೆ ನೀಡಿದ್ದಾರೆ. ಬಜೆಟ್ ಮಂಡನೆ ಮಾಡುವುದು ಬೇಡ ಎಂದು ಸಿದ್ದರಾಮಯ್ಯ ಎಲ್ಲಿಯೂ ಹೇಳಿಲ್ಲ ಎಂದರು. ಸರ್ಕಾರ ಟೇಕ್ ಆಫ್ ಆಗಿಲ್ಲ ಎಂಬುದು ಸುಳ್ಳು, ಸಮ್ಮಿಶ್ರ ಸರ್ಕಾರ ಐದು ವರ್ಷಗಳ ಕಾಲ ಇರುತ್ತೆ. ಈ ಸರ್ಕಾರವನ್ನ ದೇವರೇ ರಚನೆ ಮಾಡಿದ್ದಾನೆ. ಆ ದೇವರೇ ಐದು ವರ್ಷ ನಡೆಸುತ್ತಾನೆ. ನನ್ನ ಇಲಾಖೆಯಲ್ಲಿ ಪಶು ವೈದ್ಯರುಗಳ ಕೊರತೆ ಇದೆ. ವೈದ್ಯರ ಕೊರತೆ ನೀಗಿಸಲು 500 ಪಶು ವೈದ್ಯರ ನೇಮಕ ಮಾಡಲಾಗುವುದು' ಎಂದು ಹೇಳಿದರು.

ಬಜೆಟ್‌ನಲ್ಲಿ ಪಶು ಇಲಾಖೆಗೆ 2500 ಕೋಟಿ ಅನುದಾನ ಮೀಸಲಿಡಲು ಕೇಳಿಕೊಂಡಿದ್ದೇವೆ. ಇಸ್ರೇಲ್ ತಂತ್ರಜ್ಞಾನವನ್ನ ಬಳಿಸಿ ಮೇವು ಬೆಳೆಯಲು ಪೈಲೆಟ್ ಯೋಜನೆ ರೂಪಿಸಲಾಗಿದೆ. ಕೃಷಿ ಜಮೀನು ಇಲ್ಲದ ರೈತರೂ ಸಹ‌ ಹೈನುಗಾರಿಗೆ ಮಾಡಬಹುದಾಗಿದೆ ಎಂಬ ಮಾಹಿತಿಯನ್ನು ತಿಳಿಸಿದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ