ನಿಗಮ ಮಂಡಳಿ ನನಗೆ ಬೇಕಾಗೂ ಇಲ್ಲ: ಎಂಟಿಬಿ ನಾಗರಾಜ್

I am also an aspirant of Minister: MTB Nagaraj

29-06-2018

ಬೆಂಗಳೂರು: ‘ತಾನು ನಿಗಮ ಮಂಡಳಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಅಲ್ಲ’ ಎಂದು ಶಾಸಕ ಎಂಟಿಬಿ ನಾಗರಾಜ್ ಹೇಳಿದ್ದಾರೆ. ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನಾನು ನಿಗಮ ಮಂಡಳಿ ಅಧ್ಯಕ್ಷ ಆಕಾಂಕ್ಷಿ ಅಲ್ಲ, ನಿಗಮ ಮಂಡಳಿ ನಂಗೆ ಬೇಕಾಗೂ ಇಲ್ಲ. ನಾನು ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿ, ಹೈಕಮಾಂಡ್ ಗೆ ಮನವಿ ಕೊಟ್ಟಿದ್ದೇನೆ. ನೋಡಣ ಅಂತ ಹೇಳಿದ್ದಾರೆ' ಎಂದು ತಿಳಿಸಿದ್ದಾರೆ.

ರಾಜ್ಯ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಅವರನ್ನೂ ಸಹ ಭೇಟಿ ಮಾಡಿ, ಮನವಿ ಮಾಡುತ್ತೇನೆ. ಅವರು ಯಾವ ನಿರ್ಧಾರ ಕೈಗೊಳ್ಳುತ್ತಾರೋ ನೋಡೋಣ. ಸಿದ್ದರಾಮಯ್ಯ ಅವರನ್ನೂ ಕೇಳಿಕೊಂಡಿದ್ದೇನೆ. ಆದರೆ, ಒಳಗೆ ಏನ್ ಇದ್ಯೋ ಗೊತ್ತಿಲ್ಲ. ಹೊರಗೆ ಮಾತ್ರ ಆಯ್ತಪ್ಪಾ, ನೋಡಣ, ಮಾಡೋಣ ಅಂತಾರೆ. ಅದನ್ನೇ ಸದ್ಯಕ್ಕೆ ‌ನಂಬಿಕೊಂಡಿದ್ದೇನೆ ಎಂದು ಹೇಳಿದ್ದಾರೆ.


ಸಂಬಂಧಿತ ಟ್ಯಾಗ್ಗಳು

M.T.B. Nagaraj K.C.Venugopal ಹೈಕಮಾಂಡ್ ನಿರ್ಧಾರ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ