ಬಾಗೇಪಲ್ಲಿಯಲ್ಲಿಯಲ್ಲೊಂದು ಬೆಚ್ಚಿ ಬೀಳಿಸುವ ಘಟನೆ!

Bagepalli: son-mother tied with rope and attempted to robbery!

29-06-2018

ಚಿಕ್ಕಬಳ್ಳಾಪುರ: ಜಿಲ್ಲೆಯ ಬಾಗೇಪಲ್ಲಿ ತಾಲ್ಲೂಕಿನ ಮಾರ್ಗಾನುಕುಂಟೆ ಗ್ರಾಮದಲ್ಲಿ ಬೆಚ್ಚಿ ಬೀಳಿಸುವ ಘಟನೆಯೊಂದು ನಡೆದಿದೆ. ಹಾಡಹಗಲೇ ಕಳ್ಳತನಕ್ಕಿಳಿದಿದ್ದ ಕಳ್ಳರು ಗ್ರಾಮದ ಮನೆಯೊಂದಕ್ಕೆ ಏಕಾಏಕಿ ನುಗ್ಗಿ, ಮನೆಯಲ್ಲಿದ್ದ ತಾಯಿ ಮಗನನ್ನು ಕಟ್ಟಿ ಹಾಕಿ ದರೋಡೆಗೆ ಯತ್ನಸಿದ್ದಾರೆ. ಮಾರುತಿ ಆಮ್ನಿ ಕಾರಿನಲ್ಲಿ ಬಂದಿದ್ದ ನಾಲ್ವರು ಕಳ್ಳರು, ಗ್ರಾಮದ ಸುರೇಂದ್ರ ಬಾಬು ಹಾಗೂ ಆತನ ತಾಯಿಯನ್ನು ದುಷ್ಕರ್ಮಿಗಳು ಕಟ್ಟಿಹಾಕಿ, ಹಣ ಹಾಗೂ ಚಿನ್ನಾಭರಣ ದರೋಡೆಗೆ ಯತ್ನಿಸಿದ್ದಾರೆ. ಈ ವೇಳೆ ಸುರೇಂದ್ರಬಾಬು ಕಿರುಚಾಟದಿಂದ ಎದುರು ಮನೆಯವರು ಸುರೆಂದ್ರ ಮನೆ ಬಳಿಗೆ ಧಾವಿಸಿದ್ದಾರೆ. ಇವರನ್ನು ಕಂಡ ದುಷ್ಕರ್ಮಿಗಳು ಕ್ಷಣ ಮಾತ್ರದಲ್ಲಿ ತಪ್ಪಿಸಿಕೊಂಡು ಪರಾರಿಯಾಗಿದ್ದಾರೆ. ಘಟನಾ ಸ್ಥಳಕ್ಕೆ ಚಿಕ್ಕಬಳ್ಳಾಪುರ ಡಿವೈಎಸ್ಪಿ ಪ್ರಭು ಶಂಕರ್ ಭೇಟಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Robbery Bagepalli ಕಿರುಚಾಟ ಡಿವೈಎಸ್ಪಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ