ದಲಿತ ಯುವಕನನ್ನು ಅವಮಾನಿಸಿದ ಪುಂಡರು

Drunked man insulted a dalit guy at koppal

29-06-2018

ಕೊಪ್ಪಳ: ಕಂಠಪೂರ್ತಿ ಕುಡಿದು ನಾಲಿಗೆ ಹರಿಬಿಟ್ಟ ಪುಂಡರು ದಲಿತ ಯುವಕಯೊಬ್ಬನನ್ನು ಅವಾಚ್ಯ ಪದಗಳಿಂದ ನಿಂದಿಸಿದ್ದಾರೆ. ಗಂಗಾವತಿ ತಾಲ್ಲೂಕಿನ ಉಡಮಕಲ್ ಗ್ರಾಮದಲ್ಲಿ ದಲಿತ ಯುವಕನಿಗೆ ಪುಂಡ ಯುವಕರು ಅವಮಾನ ಮಾಡಿದ್ದಾರೆ. ಕುಡಿದ ಮತ್ತಿನಲ್ಲಿ ಮಾದಿಗ ಯುವಕನಿಗೆ ಅವಾಚ್ಯ ಪದಗಳಿಂದ ನಿಂದಿಸಿ, ಬೆದರಿಕೆ ಹಾಕಿದ್ದಾರೆ. ಶರಣಪ್ಪ ಬುಗ್ಗಿ, ಮಾರುತಿ ಬುರ್ಲೆಪ್ಪ ಎಂಬ ಯುವಕರು ಜಾತಿ ಹೆಸರಿನಿಂದ ನಿಂದಿಸಿದ್ದಾರೆ. ತನ್ನ ಪಾಡಿಗೆ ಕೆಲಸ ಮಾಡಿಕೊಂಡಿದ್ದ ಯುವಕನನ್ನು ಕುಡಿದ ಮತ್ತಿನಲ್ಲಿ ಜಾತಿ ನಿಂದನೆ ಮಾಡಿ, ಬೆದರಿಕೆ ಹಾಕಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಘಟನೆ ಕುರಿತು ಆಕ್ಷೇಪದ ಮಾತುಗಳು ಕೇಳಿಬರುತ್ತಿವೆ. ಮಾದಿಗ ಜನಾಂಗವನ್ನು ನಿಂದನೆ ಮಾಡಿದ ಯುವಕರ ವಿರುದ್ಧ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಜಾತಿನಿಂದನೆ ಪ್ರಕರಣ ದಾಖಲು ಮಾಡಲಾಗಿದೆ.


ಸಂಬಂಧಿತ ಟ್ಯಾಗ್ಗಳು

dalit gangavathi ಜನಾಂಗ ಕುಡುಕರ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ