ಬಿಜೆಪಿ ಅಧಿಕಾರಕ್ಕೆ ಬರುವ ಪ್ರಯತ್ನ ಮಾಡಬಹುದು:ಬಿಎಸ್ವೈ

BJP can try to get power: BSY

29-06-2018

ಬೆಂಗಳೂರು: ಈಗಲೂ ಕಾಲ ಮಿಂಚಿಲ್ಲ, ಬಿಜೆಪಿ ಅಧಿಕಾರಕ್ಕೆ ಬರುವ ಪ್ರಯತ್ನ ಮಾಡಬಹುದು ಎಂದು  ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ. ಬೆಂಗಳೂರಿನಲ್ಲಿ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಬಿ.ಎಸ್.ಯಡಿಯೂರಪ್ಪ ಮಾತನಾಡಿದರು.

ವಿಧಾನಸಭಾ ಚುನಾವಣೆಯಲ್ಲಿ ನಿಶ್ಚಿತವಾಗಿ 130 ಸ್ಥಾನ ಗೆಲ್ಲುತ್ತೇವೆಂದು ನಾವೆಲ್ಲಾ ಕೆಲಸ ಮಾಡಿದ್ವಿ. ಪ್ರಧಾನಿ ನರೇಂದ್ರ ಮೋದಿ, ಪಕ್ಷದ ಅಧ್ಯಕ್ಷ ಅಮಿತ್ ಷಾ ಅವರು ಮತ್ತು ಬೇರೆ ಬೇರೆ ರಾಜ್ಯದ ಮುಖ್ಯಮಂತ್ರಿಗಳು ರಾಜ್ಯ ಪ್ರವಾಸ ಮಾಡಿದ್ದರು. ಆದರೂ, ನಾವು 104ಸ್ಥಾನ ಗೆದ್ದು ಪ್ರತಿಪಕ್ಷದಲ್ಲಿ ಕುಳಿತುಕೊಳ್ಳುವ ಪರಿಸ್ಥಿತಿ ಬಂದಿದೆ ಎಂದು ವಿಷಾದಿಸಿದರು.

ಪ್ರತಿಯೊಬ್ಬರು ರಾಜ್ಯದಲ್ಲಿ ಹೇಳುತ್ತಿರುವುದು ಬಿಜೆಪಿಗೆ ಹಿನ್ನಡೆ ಹೇಗೆ ಆಯ್ತು, ಈಗಲೂ ಕಾಲ ಮಿಂಚಿಲ್ಲ ಬಿಜೆಪಿ ಅಧಿಕಾರಕ್ಕೆ ಬರುವ ಪ್ರಯತ್ನ ಮಾಡಬಹುದು ಎಂದರು. ನಮ್ಮ 104 ಶಾಸಕರು ಮತ್ತು 8ಜನ ಪರಿಷತ್ ಸದಸ್ಯರಿಗೆ ಅಭಿನಂದನೆ ಸಲ್ಲಿಸುತ್ತೇನೆ. ನಾವು 40ಸ್ಥಾನದಿಂದ 104 ಸ್ಥಾನ ಮುಟ್ಟಿದ್ದೇವೆ, ಕಾಂಗ್ರೆಸ್ 132 ರಿಂದ 78ಕ್ಕೆ ಕುಸಿದಿದೆ, ಜೆಡಿಎಸ್ 38ಕ್ಕೆ ಕುಸಿದಿದೆ.

ಸಿದ್ದರಾಮಯ್ಯನವರು ಚಾಮುಂಡೇಶ್ವರಿಯಲ್ಲಿ ಸೋತು, ಬಾದಾಮಿಯಲ್ಲಿ ಕೇವಲ 1600 ಮತಗಳಿಂದ ಮಾತ್ರ ಗೆದ್ದಿದ್ದಾರೆ, ಅಷ್ಟೇ ನಾವಿವತ್ತು 113ಸ್ಥಾನ ಗೆಲ್ಲಲಿಕ್ಕಾಗಲಿಲ್ಲವಲ್ಲ ಅನ್ನೊ ನೋವಿದೆ ಎಂದು ಯಡಿಯೂರಪ್ಪ ಹೇಳಿದರು.

ಈ ರಾಜ್ಯದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರು ನಮ್ಮ ಬಿಜೆಪಿ ಪರವಾಗಿ ನಿಂತರು. ಈ ದೇಶದಲ್ಲಿ ಚುನಾವಣೆಯಲ್ಲಿ ಯಾರಿಗೂ ಬಹುಮತ ಬಾರದಿದ್ದಾಗ ಸಿಂಗಲ್ ಲಾರ್ಜೆಸ್ಟ್ ಪಾರ್ಟಿಗೆ ಅವಕಾಶ ಕೊಡುವುದು ನಮಗೆಲ್ಲ ಗೊತ್ತು. ಆದರೆ, ಸುಪ್ರೀಂ ಕೋರ್ಟ್ ನಲ್ಲಿ ಮಧ್ಯರಾತ್ರಿ ಈ ಕುರಿತು ಚರ್ಚೆ ಆಯ್ತು, ನಮ್ಮ‌ ದೇಶದ ಇತಿಹಾಸದಲ್ಲಿ 15 ದಿನ ಬಹುಮತ ಸಾಬೀತಿಗೆ ಅವಕಾಶ ಇದ್ದರು ಕೂಡ 24ಗಂಟೆ ಅವಕಾಶ ಕೋಡುವ ರೀತಿ ಮಾಡಿದನ್ನ ನಾನು ಈವರೆಗೂ ಕಂಡಿರಲಿಲ್ಲ ಎಂದು ಟೀಕಿಸಿದರು.

ರಾಜ್ಯದಲ್ಲಿ ಎಲ್ಲಿಗೆ ಹೋದರು ನಮ್ಮನ್ನ ಕೆಳುವುದು ಒಂದೇ ಬಿಜೆಪಿಗೆ ಎಲ್ಲಿ ಹಿನ್ನಡೆ ಆಯ್ತು ಅಂತ, ರಾಜ್ಯದಲ್ಲಿ 25000ಸಾವಿರದಷ್ಟು ನಕಲಿ ಮತಗಳನ್ನು ಕಾಂಗ್ರೆಸ್ ಮಾತ್ತು ಜೆಡಿಎಸ್ ಸೃಷ್ಟಿಮಾಡಿರುವುದು ನಿಮಗೆ ಗೊತ್ತು ಎಂದು ಕಾರ್ಯಕಾರಿಣಿ ಸಭೆಯಲ್ಲಿ ಯಡಿಯೂರಪ್ಪ  ತಿಳಿಸಿದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ