ಗೌರಿ ಹತ್ಯೆ: ಮತ್ತೊಂದು ಮಹತ್ವದ ಮಾಹಿತಿ ಬಹಿರಂಗ!

one more important information about gauri lankesh Murder! what is it?

29-06-2018

ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್​​ ಹತ್ಯೆ ಕುರಿತು ಮತ್ತೊಂದು ಮಹತ್ವದ ಮಾಹಿತಿ ಹೊರ ಬಿದ್ದಿದೆ. ಗೌರಿ ಲಂಕೇಶ್​​ ಹತ್ಯೆ ಪ್ರಕರಣದ ಹಿಂದೆ ಕಿಂಗ್​ ಪಿನ್​ ಒಬ್ಬರ ಕೈಕಾಡ ಇರುವುದರ ಕುರಿತು​ ಮಾಹಿತಿ ತಿಳಿದು ಬಂದಿದೆ. ಗೌರಿ ಹತ್ಯೆಯನ್ನು ಆಪರೇಟ್​​ ಮಾಡಿದ್ದೆ ಆ ಮಾಸ್ಟರ್​​ ಮೈಂಡ್.​ಮಹಾರಾಷ್ಟ್ರದ ಪುಣೆಯಲ್ಲೇ ಕೂತು ಗೌರಿ ಹತ್ಯೆಗೆ ಸಂಚು ರೂಪಿಸಿದ್ದ ಆ ಕಿಂಗ್ ​ಪಿನ್​ ಎನ್ನುವ ಹೊಸ ಮಾಹಿತಿ ಹೊರಬಂದಿದೆ.

ಗೌರಿ ಲಂಕೇಶ್​​ ಹತ್ಯೆ ವಿಷಯ ಬಂದಾಗ ಆತನ ಮಾತೇ ಫೈನಲ್​​. ಆತನ ಮಾತಿನಂತೆ ಗೌರಿಯವರನ್ನು ಹಂತಕರು ಹತ್ಯೆಗೈದಿದ್ದರು ಎನ್ನಲಾಗಿದೆ. ಪತ್ರಕರ್ತೆ ಗೌರಿ ಲಂಕೇಶ್​​ ಹತ್ಯೆಯ ಹಿಂದಿರೊ ಮಾಸ್ಟರ್​ ಮೈಂಡ್​​ ದಾದ ಅಲಿಯಾಸ್​​ ಬೆಳಗಾಂ ಅಂಕಲ್. ಗೌರಿ ಹಂತಕರಿಗೆ ದಾದನ ಮಾತು ಅಶರೀರವಾಣಿ . ದಾದನನ್ನ ಪ್ರೀತಿಯಿಂದ ಬೆಳಗಾಂ ಅಂಕಲ್​​ ಎಂದು ಕರೆಯುತ್ತಿದ್ದರಂತೆ ಗೌರಿ ಹಂತಕರು. ಅಜ್ಞಾತ ಸ್ಥಳದಲ್ಲಿ ಕೂತು ಹತ್ಯೆಯ ಪ್ಲಾನ್​ ರೆಡಿ ಮಾಡಿಕೊಟ್ಟಿದ್ದ ಕಿಂಗ್​ ಪಿನ್​​ಗಾಗಿ ಎಸ್ಐಟಿ ಅಧಿಕಾರಿಗಳು ಬಲೆ ಬಿಸಿದ್ದಾರೆ.

ಹಂತಕರನ್ನ ಫೈನಲ್ ಮಾಡೋದೇ ದಾದ ಅಲಿಯಾಸ್​​ ಬೆಳಗಾಂ ಅಂಕಲ್ ಎನ್ನಲಾಗಿದೆ. ಗೌರಿ ಹಂತಕರ ಪೈಕಿ ದಾದನನ್ನ ನೋಡಿರೋದು ಇಬ್ಬರು ಆರೋಪಿಗಳು ಮಾತ್ರ. ದಾದ ಹೇಳಿದ್ದಂತೆ ಗೌರಿ ಹತ್ಯೆಗೆ ಸ್ಕೆಚ್​​ ಹಾಕಿದ್ದರಂತೆ. ಹತ್ಯೆಯ ಸ್ಕೆಚ್​​ನ ಬ್ಲೂಪ್ರಿಂಟ್​​ ಅನ್ನು ದಾದನಿಗೆ ಕಳಿಸಿದ್ದರು ಹಂತಕರು. ಇದಾದ ನಂತರ ದಾದ ಓಕೆ ಎನ್ನುತ್ತಿದ್ದಂತೆ ಇತ್ತ ಗೌರಿ ಲಂಕೇಶ್​​ ಹತ್ಯೆಗೈದಿದ್ದರು ಎಂದು ಹೇಳಲಾಗುತ್ತಿದೆ. ಆದರೆ, ಎಸ್​ಐಟಿ ಅಧಿಕಾರಿಗಳಿಗೆ ದಾದನ ಸುಳಿವನ್ನು ಗೌರಿ ಹಂತಕರು ಈವರೆಗೆ ಬಿಟ್ಟುಕೊಟ್ಟಿಲ್ಲ.


ಸಂಬಂಧಿತ ಟ್ಯಾಗ್ಗಳು

Gauri Lankesh Belagav uncle ಎಸ್​ಐಟಿ ಸ್ಕೆಚ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ