ಬ್ಯಾನರ್ ಹಾಕಿದ್ದಾರೆಂದು ದಲಿತರ ಮೇಲೆ ಹಲ್ಲೆ!

Violence on Dalits one more incident at yadgir!

29-06-2018

ಯಾದಗಿರಿ: ಮಹಾರಾಷ್ಟ್ರದ ಜಲಗಾಂವ್ ನಲ್ಲಿ ಮೇಲ್ಜಾತಿಯ ಕೃಷಿಕನ ಜಮೀನಿನಲ್ಲಿದ್ದ ಬಾವಿಯಲ್ಲಿ ಈಜಾಡಿದ ಮೂವರು ದಲಿತ ಬಾಲಕರನ್ನು ನಗ್ನಗೊಳಿಸಿ, ಥಳಿಸಿ ಹಿಂಸೆ ನೀಡಿದ ಘಟನೆ ಹಸಿರಾಗಿರುವಾಗಲೇ, ಇಂಥದ್ದೇ ಮತ್ತೊಂದು ಘಟನೆ ಯಾದಗಿರಿ ಜಿಲ್ಲೆಯಲ್ಲಿ ನಡೆದಿದೆ. ಜಿಲ್ಲೆಯ ಸುರುಪುರ ತಾಲ್ಲೂಕಿನ ಹಂದ್ರಾಳ (ಎಸ್.ಡಿ) ಗ್ರಾಮದಲ್ಲಿ ದಲಿತ ವ್ಯಕ್ತಿಯೊಬ್ಬರ ಹುಟ್ಟುಹಬ್ಬದ ಬ್ಯಾನರ್ ಹಾಕಿರುವುದಕ್ಕೆ ಮೇಲ್ಜಾತಿಯವರು ದಲಿತರ ಮೇಲೆ ಹಲ್ಲೆ ನಡೆಸಿದ್ದಾರೆ. ದೇವರಾಜ(23), ಚಂದ್ರಮ್ಮ (45) ಎಂಬುವರ ಮೇಲೆ ಹಲ್ಲೆ ಮಾಡಿದ್ದಾರೆ. ಅಲ್ಲದೆ ಅಕ್ಕಪಕ್ಕದ ದಲಿತ‌ರ ಮನೆಗಳಿಗೆ ನುಗ್ಗಿ ಹಲ್ಲೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಅದೇ ಗ್ರಾಮದ ಗಂಗಣ್ಣ, ಶರಣಗೌಡ ಸೇರಿದಂತೆ ಆರು ಜನರಿಂದ ದಲಿತರ ಮೇಲೆ ಹಲ್ಲೆ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. ಘಟನೆಯಿಂದ ಹಂದ್ರಾಳ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಸ್ಥಳದಲ್ಲೇ ಬೀಡು ಬಿಟ್ಟಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Dalith Assault ಹಿಂಸೆ ದಲಿತ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ