‘ಕುರುಬ ಸಮುದಾಯದ ಅಧಿಕಾರಿಗಳ ವ‌ರ್ಗಾವಣೆ ನಿಲ್ಲಿಸಿ’28-06-2018

ಬೆಂಗಳೂರು: ಸರ್ಕಾರಿ ಸೇವೆಯಲ್ಲಿರುವ ಕುರುಬ ಸಮುದಾಯದ ನೌಕರರನ್ನು ರಾಜಕೀಯ ಕಾರಣಗಳಿಂದ ವರ್ಗಾವಣೆ ಮಾಡುತ್ತಿರುವ ರಾಜ್ಯ ಸರ್ಕಾರ ತನ್ನ ನೀತಿಯನ್ನು ಬದಲಾಯಿಸಿ ಕೊಳ್ಳದಿದ್ದರೆ ರಾಜ್ಯಾದ್ಯಂತ ಹೋರಾಟ ನಡೆಸುವುದಾಗಿ ಕಾಗಿನೆಲೆ ಪೀಠದ ನಿರಂಜನಾನಂದಪುರಿ ಸ್ವಾಮೀಜಿ ಎಚ್ಚರಿಕೆ ನೀಡಿದ್ದಕ್ಕೆ ಪೂರಕವಾಗಿ ಈಗ ಕುರುಬರ ಸಂಘ ಸಹ ರಂಗ ಪ್ರವೇಶವೇಶಿಸಿದೆ.

ಮುಖ್ಯಮಂತ್ರಿಗಳೇ ಕುರುಬ ಸಮುದಾಯದ ಅಧಿಕಾರಿಗಳ ವರ್ಗಾವಣೆಯನ್ನು ನಿಲ್ಲಿಸಿ ಎಂದು  ಸಂಘ ಆಗ್ರಹಿಸಿದೆ.

ಬೆಂಗಳೂರಿನಲ್ಲಿ ಸುದ್ದಿಗೋಷ್ಟಿ ನಡೆಸಿ ಹಿಂದುಳಿದ ವರ್ಗಗಳ ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಕುರುಬ ಸಮುದಾಯದ ಅಧಿಕಾರಿಗಳನ್ನು ಉದ್ದೇಶಪೂರಕವಾಗಿ ವರ್ಗಾವಣೆ ಮಾಡಲಾಗುತ್ತಿದೆ ಎಂದು ಕರ್ನಾಟಕ ಪ್ರದೇಶ ಕುರುಬರ ಸಂಘದ ಅಧ್ಯಕ್ಷ ಡಾ|| ರಾಜೇಂದ್ರ ಸಣ್ಣಕ್ಕಿ, ಪ್ರಧಾನ ಕಾರ್ಯದರ್ಶಿ ಕೆ.ಎಂ.ರಾಮಚಂದ್ರಪ್ಪ ಮತ್ತು ಪದಾಧಿಕಾರಿಗಳು ತೀವ್ರವಾಗಿ ಖಂಡಿಸಿದ್ದಾರೆ.

ಕುರುಬ ಸಮುದಾಯದ ಅಧಿಕಾರಿಗಳನ್ನು ಅವಧಿ ಪೂರ್ಣ ವರ್ಗಾವಣೆ ಮಾಡುತ್ತಿರುವುದು ಸರ್ಕಾರದ ಸೇಡಿನ ಕ್ರಮ ಎಂಬ ಭಾವನೆ ಬಿತ್ತುವ ಅಪಾಯವಿದೆ. ಹೀಗಾಗಿ, ವರ್ಗಾವಣೆಗೊಂಡಿರುವ ಅಧಿಕಾರಿಗಳನ್ನು ಮರು ನಿಯುಕ್ತಿಗೊಳಿಸಲು ಮುಂದಾಗಬೇಕೆಂದು ಸಂಘ ಆಗ್ರಹಪಡಿಸಿದೆ.

ಅಧಿಕಾರಗಳು ಕುರುಬ ಸಮುದಾಯದವರೆಂಬ ಕಾರಣಕ್ಕೆ ಮನಸೋಇಚ್ಛೆ ವರ್ಗಾಯಿಸುತ್ತಿರುವುದರಿಂದ ಸಮ್ಮಿಶ್ರ ಸರ್ಕಾರದ ಮೌಲ್ಯ ಮತ್ತು ನಂಬಿಕೆಯನ್ನು ಕಳೆದುಕೊಳ್ಳುತ್ತಿದೆ. ನಾಡಿನ ಅಭಿವೃದ್ಧಿಯಲ್ಲಿ ಅಧಿಕಾರಿಗಳ ಪಾತ್ರ ಮುಖ್ಯ. ಇವರುಗಳನ್ನು ಸೇಡಿನ ಕ್ರಮವಾಗಿ ಸ್ಥಳ ತೋರಿಸದೆ ವರ್ಗಾಯಿಸಿ ಅವಮಾನಗೊಳಿಸುವುದನ್ನು ನಿಲ್ಲಿಸಬೇಕೆಂದು ಒತ್ತಾಯಿಸಿದೆ.

ಕುರುಬ ಎಂಬ ಜಾತಿಯ ಕಾರಣಕ್ಕಾಗಿ ವರ್ಗಾಯಿಸುವುದರಿಂದ ಅವರುಗಳಲ್ಲಿರುವ ಆತ್ಮಸ್ಥೆರ್ಯ, ಸಾಮರ್ಥ್ಯ, ಪ್ರತಿಭೆ ಎಲ್ಲವೂ ಮುರುಟಿಹೋಗಿ ಬೀಡುವ ಅಪಾಯವಿದೆ. ಇಂತಹ ಕಿರುಕುಳಗಳನ್ನು ನಿಲ್ಲಿಸಬೇಕೆಂದು ರಾಜೇಂದ್ರ ಸಣ್ಣಕ್ಕಿ ಹಾಗೂ ರಾಮಚಂದ್ರಪ್ಪ ಒತ್ತಾಯಿಸಿದ್ದಾರೆ.

ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಲೋಕೋಪಯೋಗಿ ಇಲಾಖೆ, ನೀರಾವರಿ ಇಲಾಖೆಯ ಸುಮಾರು 52 ಮುಖ್ಯ ಎಂಜಿನಿಯರುಗಳನ್ನು ಮತ್ತು ಐಎಎಸ್, ಐಪಿಎಸ್, ಕೆಎಎಸ್ ಅಧಿಕಾರಿಗಳನ್ನು ಸಮನ್ವಯ ಸಮಿತಿಯ ಗಮನಕ್ಕೂ ತಾರದೇ ವರ್ಗಾವಣೆ ಮಾಡಲಾಗಿದೆ. ಇದು ಸಮ್ಮಿಶ್ರ ಸರ್ಕಾರದ ರಾಜನೀತಿಯೇ ಎಂದು ಪ್ರಶ್ನಿಸಿದ್ದಾರೆ.

ಸಮ್ಮಿಶ್ರ ಸರ್ಕಾರ ರಚನೆಗೆ ಸಂಪೂರ್ಣ ಸಹಮತ ನೀಡಿದ್ದ ಸಿದ್ದರಾಮಯ್ಯರವರನ್ನು ಸಮನ್ವಯ ಸಮಿತಿಯ ಅಧ್ಯಕ್ಷರನ್ನಾಗಿಸಿ ಎಲ್ಲಾ ನಿರ್ಣಯಗಳನ್ನು ತಾವೆ ಕೈಗೊಂಡು ಕಡೆಗಣಿಸುವುದು ಸೂಕ್ತವಲ್ಲ ಎಂದು ಹೇಳಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ