ರೈತನ ಮೇಲೆ ಕರಡಿ, ಮಹಿಳೆ ಮೇಲೆ ಹುಲಿ ದಾಳಿ

Bear attacked on a farmer, tiger attack on woman!

28-06-2018

ಬಳ್ಳಾರಿ: ತನ್ನ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ರೈತನ ಮೇಲೆ ಕರಡಿ ದಾಳಿ ಮಾಡಿದೆ. ಜಿಲ್ಲೆಯ ಕೂಡ್ಲಿಗಿ ತಾಲ್ಲೂಕಿನ ಓಬಳಶೆಟ್ಟಿ ಹಳ್ಳಿಯಲ್ಲಿ ಘಟನೆ ನಡೆದಿದೆ. ದಾಳಿಯಿಂದ ರೈತ ದುರುಗಪ್ಪಗೆ ಗಂಭೀರ ಗಾಯಗಳಾಗಿದ್ದು, ಅದೃಷ್ಟವಶಾತ್ ಪ್ರಣಾಪಾಯದಿಂದ ಪಾರಾಗಿದ್ದಾರೆ. ತನ್ನ ಜಮೀನಿನಲ್ಲಿ ಎಂದಿನಂತೆ ಕೆಲಸ ಮಾಡುತ್ತಿದ್ದ ರೈತನ ಮೇಲೆ ಏಕಾಏಕಿ ಕರಡಿ ದಾಳಿ ಮಾಡಿದೆ. ದುರುಗಪ್ಪ ಚೀರಿಕೊಂಡ ಹಿನ್ನೆಲೆ ಪಕ್ಕದ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದವರು ಕರಡಿಯನ್ನು ಓಡಿಸಿ ದುರುಗಪ್ಪನನ್ನು ರಕ್ಷಿಸಿದ್ದಾರೆ. ಇದೀಗ ಗಾಯಾಳು ರೈತ ಚಿಕ್ಕಜೋಗಿಹಳ್ಳಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸ್ಥಳಕ್ಕೆ ಗುಡೆಕೋಟೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮತ್ತೊಂದೆಡೆ ಚಿಕ್ಕಮಗಳೂರಿನಲ್ಲಿ ಕುರಿಗಾಯಿ‌ ಮಹಿಳೆ ಮೇಲೆ‌‌‌‌ ಹುಲಿ ದಾಳಿ ಮಾಡಿದೆ. ತಾಲ್ಲೂಕಿನ ಕುನ್ನಾಳು ಗ್ರಾಮದ ಗುಡ್ಡದಲ್ಲಿ ಲೀಲಾವತಿ ಎಂಬ ಮಹಿಳೆ ಮೇಲೆ ದಾಳಿ ಮಾಡಿದೆ. ಗುಡ್ಡದ ಮೇಲೆ ಲೀಲಾವತಿ ಕುರಿ ಕಾಯುತ್ತಿದ್ದರು. ಈ ವೇಳೆ ಕುರಿಯನ್ನು ಭೇಟೆಯಾಡಲು ಬಂದ ಹುಲಿ ಮಹಿಳೆ ಮೇಲೂ ದಾಳಿ ಮಾಡಿದೆ. ದಾಳಿಯಿಂದ ಮಹಿಳೆಯ ಕಾಲಿಗೆ ತೀವ್ರಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Bear attack tiger ಅರಣ್ಯಾಧಿಕಾರಿ ಕುರಿಗಾಯಿ‌


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ