ಶಾಸಕ ಶ್ರೀರಾಮುಲುಗಾಗಿ ರಾಗಿ ರೊಟ್ಟಿ, ಬದನೆಕಾಯಿ ಚಟ್ನಿ

MLA sriramulu visited a dalit family in molakalmuru

28-06-2018

ಚಿತ್ರದುರ್ಗ: ಮೊಳಕಾಲ್ಮೂರು ಕ್ಷೇತ್ರದ ಶಾಸಕ ಬಿ.ಶ್ರೀರಾಮುಲು ದಲಿತ ಕಾಲೋನಿಯಲ್ಲಿ ವಾಸ್ತವ್ಯ ಹೂಡಿದ್ದಾರೆ. ಕ್ಷೇತ್ರದ ನೆಲಗೇತಲಹಟ್ಟಿ ಗ್ರಾಮದ ದುರುಗಪ್ಪ ಎಂಬುವವರ ಗುಡಿಸಲಿಗೆ ಆಗಮಿಸಿದ ಶ್ರೀರಾಮುಲು ದುರುಗಪ್ಪ ಅವರ ಕುಟುಂಬದ ಸಮಸ್ಯೆ ಆಲಿಸಿದರು. ಈ ವೇಳೆ ಶಾಸಕ ಬಳಿ ತಮ್ಮ ಬಡತನದ ಅಳಲು ತೋಡಿಕೊಂಡರು ದುರುಗಪ್ಪ ಅವರ ಪತ್ನಿ ಮಂಜಮ್ಮ. ‘ನೀವು ಬರುವಿರೆಂದು ಬೆಳಿಗ್ಗೆಯಿಂದ ಊಟಮಾಡಿಲ್ಲವೆಂದು ಶ್ರೀರಾಮುಲು ಬಳಿ ಮಂಜಮ್ಮ ಅವರು ಹೇಳುತ್ತಿದ್ದಂತೆ, ‘ನಾನು ಬಂದಿರುವುದೇ ನಿಮ್ಮ ಸಮಸ್ಯೆ ಬಗೆಹರಿಸುವುದಕ್ಕೆ’ ಎಂದು ಧೈರ್ಯ ತುಂಬಿದ್ದಾರೆ ಶ್ರೀರಾಮುಲು.

ಶ್ರೀರಾಮುಲು ಅವರಿಗಾಗಿ ರಾಗಿ ರೊಟ್ಟಿ, ಬದನೆಕಾಯಿ ಚಟ್ನಿ, ಹಾಗಲಕಾಯಿ ಪಲ್ಯ ಸಿದ್ಧ ಪಡಿಸಿದ್ದರು. ದುರುಗಪ್ಪ ಮನೆಯಲ್ಲಿ ಕೆಲಕಾಲ ಮಾತುಕತೆ ನಂತರ, ತನ್ನೊಟ್ಟಿ ದುರುಗಪ್ಪ,  ಮಂಜಮ್ಮ ಮತ್ತು ಅವರ ಮಗಳಿಗೂ ತಾನೇ ಊಟ ಬಡಿಸಿ ಊಟ ಮಾಡಿದರು ಶಾಸಕ ಶ್ರೀರಾಮುಲು.


ಸಂಬಂಧಿತ ಟ್ಯಾಗ್ಗಳು

B.Sriramulu grama vastavaiya ದಲಿತ ಹಾಗಲಕಾಯಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ