ಮೂವರು ಹೆದ್ದಾರಿ ದರೋಡೆಕೋರರ ಬಂಧನ

police arrested robbery gang at hoskote

28-06-2018

ಬೆಂಗಳೂರು: ಮೂವರು ಹೆದ್ದಾರಿ ದರೊಡೆಕೋರರನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ 4 ಬೈಕ್, 30ಗ್ರಾಂ.ಚಿನ್ನ ವಶ ಪಡಿಸಿಕೊಳ್ಳಲಾಗಿದೆ. ವಳಗೆರೆಪುರದ ಕೇಶವ್ (26) ಎಂ.ಸತ್ಯವಾರ ಗ್ರಾಮದ ನಾರಾಯನಗೌಡ (28) ಹೊಸಕೋಟೆ ನಗರದ ಶಿವರಾಜ್ (26) ಬಂಧಿತ ಆರೋಪಿಗಳು. ಬೆಂಗಳೂರು ಗ್ರಾಮಾಂತರ ಹೊಸಕೋಟೆ ಹೆದ್ದಾರಿಗಳಲ್ಲಿ ರಾತ್ರಿ ವೇಳೆ ವಾಹನಗಳನ್ನು ಅಡ್ಡಗಟ್ಟಿ ಚಿನ್ನ, ಹಣ ಮೊಬೈಲ್ ದೋಚುತ್ತಿದ್ದರು. ಇದು ಹಲವು ದಿನಗಳಿಂದ ಮುಂದುವರೆದಿತ್ತು. ಈ ಕುರಿತು ಅನೇಕ ದೂರುಗಳು ಬಂದ ಹಿನ್ನೆಲೆ, ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿದ ವೃತ್ತ ನಿರೀಕ್ಷಕ ಮಂಜುನಾಥ್ ಹಾಗು ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Robbery Police ಹೆದ್ದಾರಿ ವಾಹನ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ