ಬೈಕ್ ಸವಾರನ ಮೇಲೆ ಕಾಡಾನೆ ದಾಳಿ

an elephant attack on bike rider!

28-06-2018

ಕೊಡಗು: ಬೈಕ್ ಸವಾರನ ಮೇಲೆ ಕಾಡಾನೆ ದಾಳಿ ಮಾಡಿದೆ. ತಾಲ್ಲೂಕಿನ ಮಾಯಮುಡಿ ರಸ್ತೆಯಲ್ಲಿ ಬೈಕ್ ನಲ್ಲಿ ತೆರಳುತ್ತಿದ್ದ ಮಜೀದ್ ಎಂಬಾತನ ಮೇಲೆ ದಾಳಿ ಮಾಡಿದೆ. ನಿನ್ನೆ ಸಂಜೆ 5ಗಂಟೆ ಸಮಯದಲ್ಲಿ ಮಜೀದ್ ಈ ಮಾರ್ಗವಾಗಿ ತೆರಳುತ್ತಿದ್ದನು. ರಸ್ತೆ ಬದಿಯ ಕೊಕ್ಕಲೆಮಾಡ ಮತ್ತಣ್ಣ ಎಂಬುವವರಿಗೆ ಸೇರಿದ ತೋಟದಿಂದ ಏಕಾಏಕಿ ಬಂದ ಕಾಡಾನೆ ದಾಳಿ ನಡೆಸಿದೆ. ಮಜೀದ್ ಗೋಣಿಕೊಪ್ಪದಿಂದ ಪೊನ್ನಪ್ಪಸಂತೆಗೆ ತೆರಳುತ್ತಿದ್ದ. ದಾಳಿಯಿಂದ ಬೈಕ್ ಸಂಪೂರ್ಣ ಜಖಂಗೊಂಡಿದೆ. ಮಜೀದ್ ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದು, ಗೋಣಿಕೊಪ್ಪ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Bike Wild Elephant ಆರೋಗ್ಯ ಕೇಂದ್ರ ಕಾಡಾನೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ