ಕೇಂದ್ರಕ್ಕೆ ನಂಜಾವಧೂತ ಶ್ರೀಗಳ ಎಚ್ಚರಿಕೆ

nanjavadutha swamiji warning to central government

27-06-2018

ಬೆಂಗಳೂರು: ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಏನಾದರೂ ತೊಂದರೆ ಕೊಟ್ಟರೆ ಸುಮ್ಮನಿರಲ್ಲ. ಸರ್ಕಾರದ ಮೇಲೆ ಗಧಾ ಪ್ರಹಾರ ಮಾಡಿದರೆ ಸಮುದಾಯ ತಿರುಗಿಬೀಳಲಿದೆ. ಲೋಕಸಭಾ ಚುನಾವಣೆಯಲ್ಲಿ ನಮ್ಮ ಬಲ ತೋರಿಸಬೇಕಾಗುತ್ತದೆ. ಸಮ್ಮಿಶ್ರ ಸರ್ಕಾರಕ್ಕೆ ತೊಂದರೆ ಕೊಟ್ಟರೆ ಹುಷಾರ್, ಸಮುದಾಯದ ವಿರೋಧವನ್ನ ಕಟ್ಟಿಕೊಳ್ಳ ಬೇಕಾಗುತ್ತದೆ ಎಂದು ಪಟ್ಟನಾಯಕನಹಳ್ಳಿ ನಂಜಾವಧೂತ ಸ್ವಾಮೀಜಿ ಪ್ರಧಾನಿ, ಬಿಜೆಪಿ ನಾಯಕರಿಗೆ ಎಚ್ಚರಿಕೆ ನೀಡಿದ್ದಾರೆ.

ಅರಮನೆ ಮೈದಾನದಲ್ಲಿ ನಡೆದ ಕೆಂಪೇಗೌಡರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಶ್ರೀಗಳು, ನಮ್ಮ ಮೆಟ್ರೋಗೆ ಕೆಂಪೇಗೌಡರ ಹೆಸರಿಡಬೇಕು ಎಂದು ಆಗ್ರಹಿಸಿದರು. ಕುಮಾರಸ್ವಾಮಿ ಐದು ವರ್ಷ ಆಡಳಿತ ನಡೆಸುತ್ತಾರೆ. ಅವರು ಐದು ವರ್ಷ ಇರುವಂತೆ ನೋಡಿಕೊಳ್ಳುವ ಜವಾಬ್ದಾರಿ ಡಿಕೆಶಿಯದ್ದು, ನಮ್ಮ ಇಡೀ ಸಮುದಾಯ ಡಿಕೆಶಿಗೆ ಬಲ ನೀಡಬೇಕಿದೆ. ಎರಡು ಮಹಾನ್ ಧೃವಗಳು ಒಟ್ಟಾಗಿವೆ. ಧೃವಗಳ ಕ್ರೋಢೀಕರಣ ಹೆಚ್ಡಿಕೆ ಸಿಎಂ ಆಗಿದ್ದಾರೆ. ಹೆಚ್.ಡಿ.ಕೆ ಸಿಎಂ ಆಗಲು ಕಾರಣ ಡಿ.ಕೆ.ಶಿವಕುಮಾರ್ ಎಂದು ಸ್ವಾಮೀಜಿ ಹೇಳಿದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ