ರಾಜಸ್ತಾನದಿಂದ ಅಫೀಮನ್ನು ತರಿಸಿಕೊಂಡು ಮಾರುತ್ತಿದ್ದವನ ಬಂಧನ !

Kannada News

26-05-2017

ಬೆಂಗಳೂರು:- ಬೇಗೂರಿನ ಕಸ ಸುರಿಯುವ ಖಾಲಿಜಾಗದಲ್ಲಿ ಮಾದಕವಸ್ತು, ಅಫೀಮು ಮಾರಾಟ ಮಾಡುತ್ತಿದ್ದ ರಾಜಸ್ಥಾನ ಮೂಲದ ಕಾರ್ಪೆಂಟರ್‌ನೊಬ್ಬನನ್ನು ಬೇಗೂರು ಪೊಲೀಸರು ಬಂಧಿಸಿದ್ದಾರೆ. ನಾಗೇನಹಳ್ಳಿಯ ಮುನ್ನಾರಾಮ್ (೩೦) ಬಂಧಿತ ಆರೋಪಿಯಾಗಿದ್ದಾನೆ. ಬಂಧಿತನಿಂದ ೧೮೦ ಗ್ರಾಂ ಅಫೀಮನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಡಿಸಿಪಿ ಡಾ. ಬೋರಲಿಂಗಯ್ಯ ತಿಳಿಸಿದ್ದಾರೆ. ರಾಜಸ್ತಾನದ ಜೋಧ್‌ಪುರ ಮೂಲದ ಆರೋಪಿಯು ಕಳೆದ ೫ ವರ್ಷಗಳಿಂದ ನಾಗೇನಹಳ್ಳಿಯಲ್ಲಿ ವಾಸಿಸುತ್ತ ತನ್ನ ಸಂಬಂಧಿಯ ಜೊತೆ ಬಡಗಿ ಕೆಲಸ ಮಾಡುತ್ತಿದ್ದ. ಮರಗೆಲಸದಿಂದ ಬರುತ್ತಿದ್ದ ಸಂಪಾದನೆ ಸಾಕಾಗದೆ ಮಾದಕವಸ್ತು ಮಾರಾಟದ ದಂಧೆಗೆ ಆರೋಪಿಯು ಇಳಿದಿದ್ದು,ಬೇಗೂರಿನ ಕಸ ವಿಲೇವಾರಿ ಮಾಡುವ ಜಾಗದಲ್ಲಿ ಅಫೀಮು ಮಾರಾಟ ಮಾಡುತ್ತಿದ್ದಾಗ ಕಾರ್ಯಾಚರಣೆ ನಡೆಸಿದ ಬೇಗೂರು ಪೊಲೀಸರಿಗೆ ಸಿಕ್ಕಿ ಬಿದಿದ್ದಾನೆ ಆರೋಪಿಯು ರಾಜಸ್ತಾನದಿಂದ ಅಫೀಮನ್ನು ತರಿಸಿಕೊಂಡು ನಗರದ ವಿವಿಧೆಡೆ ಸಂಚರಿಸಿ ಮಾರಾಟ ಮಾಡತ್ತಿದ್ದ,  ರಾಜಸ್ತಾನದಿಂದ ಸಗಟಾಗಿ ತಂದ ಅಫೀಮನ್ನು ಬೇಗೂರಿನ ಬಳಿ ವಿಲೇವಾರಿ ಮಾಡಲು ಯತ್ನಿಸುತ್ತಿದ್ದಾಗ ಪೊಲೀಸರ ಬಲೆಗೆ ಬಿದ್ದಿದ್ದಾನೆ.


ಸಂಬಂಧಿತ ಟ್ಯಾಗ್ಗಳು

ಅಫೀಮು ಅಫೀಮು ಅಫೀಮು ಅಫೀಮು


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ