ಮಂಡ್ಯ ರಾಜಕಾರಣದಲ್ಲಿ ಆರ್.ಅಶೋಕ್ ಹೆಸರು!

Mandya politics and R.ashok

27-06-2018

ಬೆಂಗಳೂರು: ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ಉಪ ಚುನಾವಣೆ ಹಿನ್ನೆಲೆ, ಜಿಲ್ಲೆಯಲ್ಲಿ ರಾಜಕೀಯ ಚಟುವಟಿಗಳು ಬಿರುಸುಗೊಂಡಿವೆ.  ಕ್ಷೇತ್ರದಲ್ಲಿ ಆರ್.ಅಶೋಕ್ ಅವರನ್ನು ಕಣಕ್ಕಿಳಿಸುತ್ತಾ ಬಿಜೆಪಿ ಹೈಕಮಾಂಡ್? ಇಂತಹದ್ದೊಂದು ಚರ್ಚೆ ಬಿಜೆಪಿ ವಲಯದಲ್ಲಿ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ.

ಒಕ್ಕಲಿಗರ ಪ್ರಾಬಲ್ಯವಿರುವ ಮಂಡ್ಯ ಕ್ಷೇತ್ರದಲ್ಲಿ ಅಶೋಕ್ ರನ್ನು ಕಣಕ್ಕಿಳಿಸಿದರೆ ಹೇಗೆ ಎಂಬ ಚಿಂತನೆ ಅಡಿಯಲ್ಲಿ, ಮಂಡ್ಯ ರಾಜಕಾರಣದಲ್ಲಿ ಆರ್.ಅಶೋಕ್ ಅವರ ಹೆಸರು ಮುನ್ನೆಲೆಗೆ ಬಂದಿದೆ. ಹಾಸನ ಬಿಟ್ಟು ದೇವೇಗೌಡರು ಮಂಡ್ಯದಿಂದ ಸ್ಪರ್ಧಿಸಿದರೆ, ಆರ್.ಅಶೋಕ್ ಸ್ಪರ್ಧೆ ನಿಶ್ಚಿತ ಎಂದೇ ಹೇಳಲಾಗುತ್ತಿದೆ. ದೇವೇಗೌಡರು ಮಂಡ್ಯದಿಂದ ಸ್ಪರ್ಧೆ ಮಾಡಿದರೆ, ಮಂಡ್ಯದಿಂದಲೇ ತಾನು ಸ್ಪರ್ಧೆಗೆ ಸಿದ್ಧ ಎಂಬ ವಿಚಾರ ತಮ್ಮ ಆಪ್ತರ ಬಳಿ ಪ್ರಸ್ತಾಪ ಮಾಡಿದ್ದಾರೆ ಎನ್ನಲಾಗಿದೆ. ಒಟ್ಟಾರೆ ಮಂಡ್ಯ ಲೋಕಸಭಾ ಉಪ ಚುನಾವಣೆ ನಿಧಾನವಾಗಿ ರಂಗೇರುತ್ತಿದೆ.

 

 


ಸಂಬಂಧಿತ ಟ್ಯಾಗ್ಗಳು

Lok Sabha Mandya politics ದೇವೇಗೌಡ ಒಕ್ಕಲಿಗ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ