ಮನೆಯ ಮೇಲ್ಚಾವಣಿ ಕುಸಿದು ಇಬ್ಬರ ಸಾವು

House roof collapse: 2 women died

27-06-2018

ದಾವಣಗೆರೆ: ಮನೆಯ ಮೇಲ್ಚಾವಣಿ ಕುಸಿದು ಇಬ್ಬರು ಮಹಿಳೆಯರು ಮೃತಪಟ್ಟಿರುವ ದಾರುಣ ಘಟನೆ, ನಿನ್ನೆ ರಾತ್ರಿ ದಾವಣಗೆರೆಯ ನಿಟ್ಟುವಳ್ಳಿಯಲ್ಲಿ ನಡೆದಿದೆ. ದ್ಯಾಮಕ್ಕ ಎಂಬ ವೃದ್ಧೆ  ಸ್ಥಳದಲ್ಲೇ ಮೃತಪಟ್ಟಿದ್ದರೆ, ಗಂಭೀರವಾಗಿ ಗಾಯಗೊಂಡಿದ್ದ ಸುಧಾ (35) ಎಂಬ ಮಹಿಳೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಕಳೆದ ರಾತ್ರಿ ಮಹಿಳೆಯರು ಮನೆ ಮುಂದೆ ಮಾತನಾಡುತ್ತಾ ಕುಳಿತುಕೊಂಡಿರುವಾಗ ಈ ದುರ್ಘಟನೆ ಸಂಭವಿಸಿದೆ. ಮೇಲ್ಚಾವಣಿ ಕುಸಿದು, ದ್ಯಾಮಕ್ಕ ಮೃತಪಟ್ಟರು, ಗಂಭೀರವಾಗಿ ಗಾಯಗೊಂಡಿದ್ದ ಸುಧಾರನ್ನು ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಅಸುನೀಗಿದ್ದಾರೆ. ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಸಂಬಂಧಿತ ಟ್ಯಾಗ್ಗಳು

women Roof ಮೇಲ್ಚಾವಣಿ ಗಂಭೀರ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ