ಸಿದ್ದರಾಮಯ್ಯ ನಾಳೆ ಡಿಸ್ಚಾರ್ಜ್

Siddaramaiah political activities will start again tomorrow!

27-06-2018

ಬೆಂಗಳೂರು: ಧರ್ಮಸ್ಥಳದ ಶ್ರೀ ಮಂಜುನಾಥೇಶ್ವರ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಕೇಂದ್ರದಲ್ಲಿ ಯೋಗ ಮತ್ತು ಪ್ರಕೃತಿ ಚಿಕಿತ್ಸೆ ಮೊರೆ ಹೋಗಿರುವ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಾಳೆಯಿಂದ ಮತ್ತೆ ರಾಜಕೀಯ ಚಟುವಟಿಕೆ ಆರಂಭಿಸಲಿದ್ದಾರೆ.

ಕಳೆದ 12 ದಿನಗಳಿಂದ ಪ್ರಕೃತಿ ಚಿಕಿತ್ಸೆಯಲ್ಲಿರುವ ಸಿದ್ದರಾಮಯ್ಯ ಇಂದೇ ಬೆಂಗಳೂರಿಗೆ ತೆರಳಲು ಸಿದ್ಧರಾಗಿದ್ದರಾದರೂ ಅವರ ಪ್ಯಾಕೇಜ್ ಚಿಕಿತ್ಸೆ ನಾಳೆಗೆ ಪೂರ್ಣಗೊಳ್ಳುವುದರಿಂದ ನಾಳೆ ಡಿಸ್ಚಾರ್ಜ್ ಮಾಡುವುದಾಗಿ ವೈದ್ಯರು ತಿಳಿಸಿದ್ದಾರೆ.

ಚುನಾವಣಾ ಪ್ರಚಾರ ಕಾರ್ಯದಿಂದ ಬಸವಳಿದಿದ್ದ ಮನಸ್ಸಿಗೆ ಬೇಕಾದ ಯೋಗಾಸನ, ಪ್ರಾಣಾಯಾಮ ಹಾಗೂ ಧ್ಯಾನವನ್ನೊಳಗೊಂಡ ಯೋಗ‌ಚಿಕಿತ್ಸೆ, ಜಲಚಿಕಿತ್ಸೆ, ಮಸಾಜ್ ಒಳಗೊಂಡ ಶರೀರಕ್ಕೆ ಶುದ್ಧೀಕರಣ‌ ಚಿಕಿತ್ಸೆ ಹಾಗು ದೇಹದಲ್ಲಿ ಸೇರಿರುವ ಕಲ್ಮಶ ತೆಗೆಯಲು ಆಹಾರ ಚಿಕಿತ್ಸೆ ನೀಡಲಾಗಿದೆ. ಇದರೊಂದಿಗೆ‌ ನಿಗದಿತ ಪ್ರಮಾಣದ ವ್ಯಾಯಾಮ, ವಾಕಿಂಗ್ ಸಿದ್ದು ಆರೋಗ್ಯದಲ್ಲಿ ಸಾಕಷ್ಟು ಬದಲಾವಣೆ ತಂದಿದೆ.


ಸಂಬಂಧಿತ ಟ್ಯಾಗ್ಗಳು

Siddaramaiah naturopathy ವ್ಯಾಯಾಮ ಆರೋಗ್ಯ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ