ಸರಗಳ್ಳತನ ಮಾಡುತ್ತಿದ್ದವರ ಬಂಧನ !

Kannada News

26-05-2017

ಬೆಂಗಳೂರು:-ಸರಗಳ್ಳತನ ಮಾಡುತ್ತಿದ್ದ  ಇಬ್ಬರನ್ನು ಶ್ರೀರಾಂಪುರದ ಪೊಲೀಸರು ಬಂಧಿಸಿದ್ದಾರೆ. ಯಶವಂತಪುರದ ಮೊಹಮ್ಮದ್ ಯಾಸಿನ್ (೩೦), ಅನಿಲ್ (೨೨), ಗೌತಮ್ (೨೬), ನಂದಿನಿ ಲೇಔಟ್ ನ ಸಂತೋಷ್ (೨೩), ನೆಲಮಂಗಲದ ಲೋಕೇಶ್ ಆಲಿಯಾಸ್ ಲೋಕಿ (೨೧), ಚೇತನ್ (೨೦), ರಾಜಗೋಪಾಲನಗರದ ಅರುಣ್ (೨೧) ಹಾಗೂ ಗೊರಗುಂಟೆಪಾಳ್ಯದ ಸುರೇಶ್ ಬಂಧಿತ ಆರೋಪಿಗಳಾಗಿದ್ದಾರೆ. ಬಂಧಿತರಿಂದ ೩ ಲಕ್ಷ ೨೦ ಸಾವಿರ ನಗದು, ೧೩ ಗ್ರಾಂ ತೂಕದ ಚಿನ್ನದ ಸರ, ೨ ದ್ವಿಚಕ್ರ ವಾಹನ ಸೇರಿ ೩.೫ ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.ಇದಲ್ಲದೆ, ಆರೋಪಿ ಸಂತೋಷ್ ಹಾಗೂ ಸುರೇಶ ಕಳೆದ ಏಪ್ರಿಲ್ ೨೮ ರಂದು ಯಶವಂತಪುರದ ಕೆಎನ್ ಎಕ್ಸ್ಟೆನ್ಷನ್ನಲ್ಲಿರುವ ಒಂಟಿ ಮಹಿಳೆಯೊಬ್ಬರ ಮನೆಗೆ ಮನೆ ಬಾಡಿಗೆ ಕೇಳುವ ನೆಪದಲ್ಲಿ ನುಗ್ಗಿ ಮಹಿಳೆ ಮೇಲೆ ಹಲ್ಲೆ ನಡೆಸಿ ೧೫ ಗ್ರಾಂ ಚಿನ್ನದ ಸರವನ್ನು ಕಸಿದು ಪರಾರಿಯಾಗಿರುವುದು ತನಿಖೆಯಲ್ಲಿ ತಿಳಿದುಬಂದಿದೆ. ಆರೋಪಿಗಳನ್ನು ಖಚಿತ ಮಾಹಿತಿ ಮೇರೆಗೆ ಬಂಧಿಸಿರುವ ಶ್ರೀರಾಂಪುರ ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ ಎಂದು ಡಿಸಿಪಿ ಲಾಬೂರಾಮ್ ತಿಳಿಸಿದ್ದಾರೆ.  .ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ