ಬೆದರಿಕೆ ಕರೆ: ನಗರ ಪೊಲೀಸರಿಂದ ಅಮೆರಿಕದಲ್ಲಿನ ಕಂಪನಿಗೆ ಪತ್ರ

Letter from the city police to the company in the United States!

26-06-2018

ಬೆಂಗಳೂರು: ಮಾರತ್ ಹಳ್ಳಿಯ ಸಿಸ್ಕೋ ಕಂಪನಿಗೆ ಹುಸಿ ಬಾಂಬ್ ಬೆದರಿಕೆ ಕರೆ ಮಾಡಿದ ಸಂಬಂಧ ಇಂಟರ್‍ ನೆಟ್ ಕರೆಗಳ ಮಾಹಿತಿ ಕೋರಿ ಅಮೆರಿಕದಲ್ಲಿ ಕಾರ್ಯನಿರ್ವಹಿಸುತ್ತಿರುವ ಕಂಪನಿಯೊಂದಕ್ಕೆ ನಗರ ಪೊಲೀಸರು ಪತ್ರ ಬರೆದಿದ್ದಾರೆ.

ನಗರದ ಸಿಸ್ಕೋ ಕಂಪನಿಗೆ ಬರುವ ಇಂಟರ್ ನೆಟ್ ಕರೆಗಳ ಸಂಪೂರ್ಣ ಮಾಹಿತಿಯನ್ನು ಅಮೆರಿಕದ ಎಟಿಎಂಪಿ ಕಂಪನಿ ಕಾರ್ಯನಿರ್ವಹಿಸುತ್ತಿದೆ. ಪ್ರಮುಖವಾಗಿ ಹುಸಿ ಬಾಂಬ್ ಕರೆ ಮಾಡಿದ ವ್ಯಕ್ತಿ ಕಂಪೆನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಉದ್ಯೋಗಿ ಆಗಿರಬಹುದು ಎಂದು ಶಂಕೆಯ ಹಿನ್ನಲೆಯಲ್ಲಿ ಈ ಪತ್ರ ಬರೆಯಲಾಗಿದೆ.

ಆರೋಪಿಯು ಕಂಪನಿಯಿಂದ ನೀಡಲಾಗುವ ಸೌಲಭ್ಯದಲ್ಲಿಯೇ ಇಂಟರ್ ನೆಟ್ ಕರೆ ಮಾಡಿರುವ ಅನುಮಾನವಿದೆ ಆರೋಪಿಯಿಂದ ಬಂದ ಕರೆ ಮಾಹಿತಿ ನೀಡುವಂತೆ ಕೇಳಲಾಗಿದೆ. ಆದರೆ, ಈವರೆಗೂ ಉತ್ತರ ಸಿಕ್ಕಿಲ್ಲವೆಂದು ವೈಟ್ ಫೀಲ್ಡ್  ವಿಭಾಗದ ಡಿಸಿಪಿ ಅಬ್ದುಲ್ ಅಹದ್ ತಿಳಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Threat call company ಇಂಟರ್ ನೆಟ್ ಸಿಸ್ಕೋ ಕಂಪನಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ