ನಡುರಸ್ತೆಯಲ್ಲಿ ಕುಡುಕರ ಪುಂಡಾಟ:9 ವಾಹನಗಳು ಜಖಂ

2 drunk guys destroyed the 9 vehicles including bus and lorry!

26-06-2018

ಬೆಂಗಳೂರು: ಮಠದಹಳ್ಳಿಯ ಮೈದಾನದಲ್ಲಿ ನಿಲ್ಲಿಸಿದ್ದ ಬಿಬಿಎಂಪಿಯ 2 ಕಸದ ಲಾರಿ, 5 ಖಾಸಗಿ ಬಸ್‍ಗಳು ಸೇರಿ 9 ವಾಹನಗಳ ಗಾಜುಗಳನ್ನು ಕುಡಿದ ಅಮಲಿನಲ್ಲಿ  ಜಖಂಗೊಳಿಸಿ ಪುಂಡಾಟ ಮಾಡಿದ್ದ ಇಬ್ಬರು ಆರ್.ಟಿ. ನಗರ ಪೊಲೀಸರ ಅತಿಥಿಯಾಗಿದ್ದಾರೆ. ಬಂಧಿತ ಆರೋಪಿಗಳನ್ನು ಮಠದಹಳ್ಳಿಯ ಕಿರಣ್ ಅಲಿಯಾಸ್ ಬಲೂನ್ (19), ಜೆಸಿ ನಗರದ ಚೇತನ್ ಅಲಿಯಾಸ್ ರಾಜ (19)ಎಂದು ಗುರುತಿಸಲಾಗಿದೆ.

ಆರೋಪಿಗಳು ರಾತ್ರಿ ಕಂಠಪೂರ್ತಿ ಕುಡಿದ ಅಮಲಿನಲ್ಲಿ ಇಂದು ಮುಂಜಾನೆ 4ರ ವೇಳೆ ಮಠದಹಳ್ಳಿಯ ಮೈದಾನದಲ್ಲಿ ನಿಲ್ಲಿಸಿದ್ದ 2 ಕಸದ ಲಾರಿ, 5 ಖಾಸಗಿ ಬಸ್, 1 ಕಾರು ಸೇರಿ 9 ವಾಹನಗಳ ಗಾಜುಗಳನ್ನು ಹೊಡೆದು ಜಖಂಗೊಳಿಸಿದ್ದರು.

ಕೃತ್ಯದ ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿ ಕಾರ್ಯಾಚರಣೆ ನಡೆಸಿದ ಆರ್.ಟಿ.ನಗರ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಕುಡಿದ ಅಮಲಿನಲ್ಲಿ ಆರೋಪಿಗಳು ಕೃತ್ಯದ ಬಗ್ಗೆ ಸರಿಯಾದ ಮಾಹಿತಿ ನೀಡುತ್ತಿಲ್ಲ ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ  ಎಂದು ಡಿಸಿಪಿ ಡಾ.ರಾಮ್‍ನಿವಾಸ್ ತಿಳಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

R.T nagar DCP ಪುಂಡಾಟ ಮೈದಾನ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ