ಶಾರ್ಟ್ ಸರ್ಕ್ಯೂಟ್‌ನಿಂದ ಲಕ್ಷಾಂತರ ಮೌಲ್ಯದ ವಸ್ತುಗಳು ಬೆಂಕಿಗಾಹುತಿ !

Kannada News

26-05-2017

ಬೆಂಗಳೂರು:- ಬಾಂಬೆ ಡೈಯಿಂಗ್ ಶೋರೊಂಗೆ ಶುಕ್ರವಾರ ನಸುಕಿನಲ್ಲಿ ಬೆಂಕಿ ತಗುಲಿ ಸಿದ್ದ ಉಡುಪುಗಳು ಮತ್ತು ಪೀಠೋಪಕರಗಳು ಸೇರಿ ಲಕ್ಷಾಂತರ ಮೌಲ್ಯದ ವಸ್ತುಗಳು ಬೆಂಕಿಗಾಹುತಿಯಾಗಿರುವ ದುರ್ಘಟನೆ ಮಲ್ಲೇಶ್ವರಂ ನ ತೆಂಗಿನಮರದ ಬೀದಿಯಲ್ಲಿ ನಡೆದಿದೆ. ಬಾಂಬೆ ಡೈಯಿಂಗ್ ಶೋರೊಂಗೆ ಮುಂಜಾನೆ ೪.೫೦ರ ವೇಳೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ತಗುಲಿದ ಬೆಂಕಿ ಸ್ವಲ್ಪ ಹೊತ್ತಿನಲ್ಲಿ ಇಡೀ ಅಂಗಡಿ ಆವರಿಸಿ ದಟ್ಟ ಹೊಗೆ ಹೊರಬರಲಾರಂಭಿಸಿತ್ತು, ಬೆಂಕಿಯನ್ನು ಗಮನಿಸಿದ ಸ್ಥಳೀಯರು ಆಗ್ನಿಶಾಮಕದಳಕ್ಕೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕೆ ಆಗ್ನಿಶಾಮಕ ಸಿಬ್ಬಂದಿ ಹಾಗೂ ನಾಲ್ಕು ವಾಹನಗಳು ಬಂದಿದ್ದು, ಬೆಳಿಗ್ಗೆ ೬ರವರೆಗೆ ಶ್ರಮಿಸಿ ಬೆಂಕಿ ನಂದಿಸಿವೆ.ಬೆಂಕಿಯಿಂದ ಸುಮಾರು ೪ ಲಕ್ಷ ರೂಗಳ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. ಶೋರೂಂ ನಲ್ಲಿ ಯಾರೂ ಇಲ್ಲದ ಕಾರಣ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ವೈಯಾಲಿಕಾವಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.


ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ