ರೈತರ ಮೇಲೆ ಅರಣ್ಯಾಧಿಕಾರಿ ದಬ್ಬಾಳಿಕೆ

A forest officer Oppression on farmer in mysore !

26-06-2018

ಮೈಸೂರು: ರೈಲ್ವೆ ಬ್ಯಾರಿಕೇಡ್ ನಿರ್ಮಾಣ ಮಾಡಲು ಅರಣ್ಯಾಧಿಕಾರಿಯೊಬ್ಬರು ರೈತರ ಮೇಲೆ ದಬ್ಬಾಳಿಕೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಜಿಲ್ಲೆಯ ಹೆಚ್.ಡಿ.ಕೋಟೆ ತಾಲ್ಲೂಕಿನ ಎಂ.ಸಿ.ತಳಲು ಗ್ರಾಮದ ನೀಲಮ್ಮ ಎಂಬುವವರ ಜಮೀನಿನಲ್ಲಿ ರೈಲ್ವೆ ಕಂಬಿ ನಿರ್ಮಾಣ ಮಾಡಲು ಜಮೀನಿನಲ್ಲಿ ಬೆಳೆದಿದ್ದ ಬೆಳೆಯನ್ನು ನಾಶ ಮಾಡಿ ಜಮೀನಿಗೆ ಅಕ್ರಮ ಪ್ರವೇಶ ಮಾಡಿ ಕೆಲಸ ಮಾಡುತ್ತಿದ್ದಾರೆ ಎಂದು ರೈತ ಆರೋಪಿಸಿದ್ದಾರೆ.

ನೀಲಮ್ಮ ಎಂ.ಸಿ.ತಳಲು ಗ್ರಾಮದ ಸರ್ವೆ ನಂಬರ್ 14ರಲ್ಲಿ 8ಎಕರೆ ಜಮೀನು ಹೊಂದಿದ್ದಾರೆ. ಹೆಡಿಯಾಲ ಉಪವಿಭಾಗದ ಎಸಿಎಫ್ ಪರಮೇಶ್ ಎಂಬುವರು, ಗುತ್ತಿಗೆಯವರೊಂದಿಗೆ ಸೇರಿಕೊಂಡು ಹಣ ಉಳಿಸುವುದಕ್ಕೆ ರೈತರ ಜಮೀನಿನಲ್ಲಿ ಕಾಮಗಾರಿ ಮಾಡಿಸುತ್ತಿದ್ದಾರೆ. ರೈತರ ಮೇಲೆ ದಬ್ಬಾಳಿಕೆ ಮಾಡುವುದೇ ಎಸಿಎಫ್ ಪರಮೇಶ ಅವರು ಕೆಲಸವಾಗಿದೆ ಎಂದು ಆರೋಪಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Farmer Railway ಎಸಿಎಫ್ ನಿರ್ಮಾಣ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ