ಇಬ್ಬರು ಪ್ರೊಫೆಸರ್ ಗಳ ಅಮಾನತು ಆದೇಶ ರದ್ದು

2 professors suspended orders canceled

26-06-2018

ಮೈಸೂರು: ಪ್ರೊ.ಮಹೇಶ್ ಚಂದ್ರಗುರು ಹಾಗೂ ಅರವಿಂದ ಮಾಲಗತ್ತಿ ಅಮಾನತ್ತು ರದ್ದುಗೊಳಿಸಿ ಮೈಸೂರು ವಿವಿ ನಿರ್ಣಯ ಕೈಗೊಂಡಿದೆ. ಕೂಡಲೇ ಕರ್ತವ್ಯಕ್ಕೆ ಹಾಜರಾಗುವಂತೆ ವಿವಿ ಕುಲಸಚಿವರು ಸೂಚಿಸಿದ್ದಾರೆ. ರಾಜ್ಯ ವಿಧಾನಸಭಾ ಚುನಾವಣೆ ವೇಳೆ ಅಗಿನ ಸಿಎಂ ಸಿದ್ದರಾಮಯ್ಯ  ಪರ ಮತ ಕೇಳಿದ್ದರು ಎಂಬ ಆರೋಪಡಿ ಇಬ್ಬರು ಪ್ರೊಫೆಸರ್ಗಳನ್ನು ಅಮಾನತು ಮಾಡಿತ್ತು.

ಕಳೆದ ಏಪ್ರಿಲ್ 14ರಂದು ಆಯೋಜಿಸಿದ್ದ 'ಜನ ರಾಜಕಾರಣ ಪ್ರಚಾರಾಂದೋಲನ' ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಪ್ರೊಫೆಸರ್ಗಳು,  ಈ ವೇಳೆ ಸಿದ್ದರಾಮಯ್ಯ ಅವರ ಪರ ಮತ ನೀಡುವಂತೆ ಬಹಿರಂಗವಾಗಿ ಮನವಿ ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು. ಈ ಹಿನ್ನೆಲೆ ಇಬ್ಬರ ವಿರುದ್ಧ ಶಿಸ್ತು ಕ್ರಮ ಜರುಗಿಸುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದ್ದರು. ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ಇಬ್ಬರಿಗೂ ಶೋಕಾಸ್ ನೋಟಿಸ್ ಜಾರಿ ಮಾಡಿತ್ತು. ಇದಕ್ಕೆ ಉತ್ತರ ನೀಡದ ಹಿನ್ನೆಲೆ ಇಬ್ಬರನ್ನೂ ಸೇವೆಯಿಂದ ಅಮಾನತು ಮಾಡಲಾಗಿತ್ತು.

ಇಬ್ಬರ ವಿಚಾರಣೆ ನಡೆಸಲು ವಿವಿ ಅನುಮೋದನೆ ಅಗತ್ಯವಾದ್ದರಿಂದ ಪ್ರಕರಣವನ್ನ ನಿಯಮಾನುಸಾರ ಸಿಂಡಿಕೇಟ್ ಸಭೆಯಲ್ಲಿ ಪ್ರಸ್ತಾಪ ಮಾಡಲಾಗಿತ್ತು.  ಜೂನ್ 21ರಂದು ನಡೆದ ಸಿಂಡಿಕೇಟ್ ಸಭೆಯಲ್ಲಿ ಇಬ್ಬರು ಪ್ರಾಧ್ಯಾಪಕರ ಅಮಾನತು ಆದೇಶ ರದ್ದುಗೊಳಿಸಿ ತೀರ್ಮಾನ ಕೈಗೊಂಡಿದ್ದಾರೆ. ಆದರೆ, ಸಿಂಡಿಕೇಟ್ ತೀರ್ಮಾನ ಮಾತ್ರ ಹಲವು ಅನುಮಾನಗಳಿಗೆ ಎಡೆಮಾಡಿ ಕೊಟ್ಟಿದೆ ಎಂಬ ಮಾತುಗಳು ಕೇಳಿ ಬಂದಿವೆ.

 

 


ಸಂಬಂಧಿತ ಟ್ಯಾಗ್ಗಳು

Mahesh chandra guru aravinda malagatti ತೀರ್ಮಾನ ಅನುಮಾನ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ