ಮುಸ್ಲಿಂ ಶಾಸಕರಿಂದ ಸಿಎಂ ಭೇಟಿ

Muslim MLAs met CM kumaraswamy

26-06-2018

ಬೆಂಗಳೂರು: ಕಾಂಗ್ರೆಸ್ ಹಾಗೂ ಜಾತ್ಯತೀತ ಜನತಾದಳದ ಮುಸ್ಲಿಂ ಶಾಸಕರು ಬೆಂಗಳೂರಿನಲ್ಲಿಂದು ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಭೇಟಿಯಾಗಿ, ರಾಜ್ಯ ಬಜೆಟ್ ನಲ್ಲಿ ಸಮುದಾಯಕ್ಕೆ ಹೆಚ್ಚುವರಿ ಆರ್ಥಿಕ ನೆರವು ಒದಗಿಸುವಂತೆ ಮನವಿ ಸಲ್ಲಿಸಿದರು. ನಿಯೋಗದಲ್ಲಿ ಸಚಿವರುಗಳಾದ ಜಮೀರ್ ಅಹಮದ್ ಖಾನ್, ಯು.ಟಿ.ಖಾದರ್, ಮಾಜಿ ರಾಜ್ಯಸಭಾ ಸದಸ್ಯ ಕೆ.ರೆಹಮಾನ್ ಖಾನ್, ಮಾಜಿ ಸಚಿವ ನಿಸಾರ್ ಅಹಮದ್ ಇತರರು ಇದ್ದರು. ಮುಸ್ಲಿಂ ಸಮುದಾಯಕ್ಕೆ ಆಗಬೇಕಿರುವ ಕೆಲಸಗಳು ಹಾಗೂ ದೊರೆಯಬೇಕಿರುವ ಸೌಲಭ್ಯಗಳ ಸಂಬಂಧ ಇದಕ್ಕೂ ಮುನ್ನ ಮುಸ್ಲಿಂ ಶಾಸಕರು ಸಭೆ ನಡೆಸಿದ್ದರು.


ಸಂಬಂಧಿತ ಟ್ಯಾಗ್ಗಳು

zameer ahmedabad U.T. Khader ಬಜೆಟ್ ರಾಜ್ಯಸಭಾ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ