ಮತ್ಸ್ಯ ಪ್ರಿಯರೇ ತುಸು ಎಚ್ಚರ!

Fish food lovers be careful!

26-06-2018

ಮಂಗಳೂರು: ಮಳೆಗಾಲದಲ್ಲಿ ತಾಜಾ ಮೀನಿನ ರುಚಿ ಚಪ್ಪರಿಸಬೇಕೆಂಬ ಆಸೆಯಾದರೆ ಸ್ವಲ್ಪ ಎಚ್ಚರವಹಿಸಿ. ಯಾಕೆಂದರೆ ಮತ್ಸ್ಯ ಪ್ರಿಯರನ್ನು ಬೆಚ್ಚಿ ಬೀಳಿಸುವ ಸುದ್ದಿಯೊಂದು ವರದಿಯಾಗಿದೆ. ಹಲವು ದಿನಗಳ ಕಾಲ ಮೀನನ್ನು ತಾಜಾವಾಗಿಡಲು ಕೆಮಿಕಲ್ ಬಳಸಲಾಗುತ್ತಿದೆ ಎಂಬ ಅಂಶ ಬೆಳಕಿಗೆ ಬಂದಿದೆ. ಹೀಗಾಗಿ ನೀವು ತಿನ್ನೋ ಮೀನು ವಿಷಕಾರಿಯಾಗಿದೆ ಎಂದೇ ಹೇಳಲಾಗುತ್ತಿದೆ. ಈ ಕುರಿತ ವೀಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಮಂಗಳೂರಿಗೆ ಬೇರೆ ರಾಜ್ಯಗಳಿಂದ ಹೊತ್ತು ತರುವ ಮೀನನ್ನು ತಾಜಾವಾಗಿಡಲು ಕೆಮಿಕಲ್ ಬಳಸಲಾಗುತ್ತಿದೆ ಎಂಬ ಸುದ್ದಿ ಮತ್ಸ್ಯ ಪ್ರಿಯರಲ್ಲಿ ಆತಂಕಕ್ಕೆ ಕಾರಣವಾಗಿದೆ. ಈ ಕುರಿತಾಗಿ ಕೆಲವರು ಸಂಬಂಧ ಪಟ್ಟ ಇಲಾಖೆಗೆ ಮಾಹಿತಿಯನ್ನು ನೀಡಿದ್ದರೂ ಇಲಾಖೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

social media fish ಮಳೆಗಾಲ ಮತ್ಸ್ಯ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


Bimariyon se bache
  • rajapatelwadi@gmail.com
  • Business