ಕೊಲೆ ಬೆದರಿಕೆ: ಪ್ರಧಾನಿಗೆ ದೂರು ನೀಡಿದ ಯುವತಿ!

threaten to murder:  a woman complains to PMO!

26-06-2018

ಮೈಸೂರು: ಹಳೇ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ನಗರದ ಪಂಚವಟಿ ಸರ್ಕಲ್ ಬಳಿ ಯುವತಿ ಮೇಲೆ ಹಲ್ಲೆ ನಡೆಸಿ, ಕೇಸ್ ವಾಪಸ್ ಪಡೆಯುವಂತೆ ಆರೋಪಿಗಳು ವಾರ್ನಿಂಗ್ ಮಾಡಿರುವುದು ಬೆಳಕಿಗೆ ಬಂದಿದೆ. ಮೈಸೂರಿನ ಜಯಲಕ್ಷ್ಮೀ ಪುರಂ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಕೇಸ್ ಒಂದರಲ್ಲಿ ಯುವತಿ ಹೆಸರಿಸಲಾಗಿರುವ ಆರೋಪಿಗಳು ಯುವತಿ ಮೇಲೆ ಹಲ್ಲೆ ಮಾಡಿದ್ದಾರೆ. ಕೇಸ್ ವಾಪಸ್ ಪಡೆಯುವಂತೆ ಡ್ರ್ಯಾಗರ್ ತೋರಿಸಿ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ತಿಳಿದು ಬಂದಿದೆ.

ಆದರೆ, ಯುವತಿ ಜೀವ ಭಯದಿಂದ ಆರೋಪಿಗಳ ವಿರುದ್ಧ ಪ್ರಧಾನ ಮಂತ್ರಿ ಅವರಿಗೆ ಇ-ಮೇಲ್ ಮೂಲಕ ದೂರು ನೀಡಿದ್ದಾರೆ. ‘ಮೈಸೂರಿನಲ್ಲಿ ಯುವತಿಯರಿಗೆ ರಕ್ಷಣೆ ಇಲ್ಲ, ಪೊಲೀಸರಿಗೆ ದೂರು ಕೊಟ್ಟು 48ಗಂಟೆ ಕಳೆದರೂ ಆರೋಪಿಗಳನ್ನು ಬಂಧಿಸಿಲ್ಲ' ಎಂದು ಪ್ರಧಾನ ಮಂತ್ರಿಗಳ ಬಳಿ ತಮ್ಮ ಅಳಲು ತೋಡಿಕೊಂಡಿದ್ದಾರೆ. ಇತ್ತ ಪ್ರಧಾನ ಮಂತ್ರಿಗಳ ಕಚೇರಿಯಿಂದ ಯುವತಿಯ ದೂರನ್ನು ಸ್ವೀಕಾರ ಮಾಡಿದ್ದು, ಪೂರಕ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ತಿಳಿದು ಬಂದಿದೆ.


ಸಂಬಂಧಿತ ಟ್ಯಾಗ್ಗಳು

PMO E-Mail ಆರೋಪಿ ಸರ್ಕಲ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ