ಅನುಮಾನಕ್ಕೆ ಎಡೆಮಾಡಿದ ಜಿಲ್ಲಾಧಿಕಾರಿ ಬದಲಾವಣೆ!

District Collector immediate change after his Charge of 5 days!

26-06-2018

ಕೋಲಾರ: ಜಿಲ್ಲೆಯ ಪ್ರಭಾರಿ ಜಿಲ್ಲಾಧಿಕಾರಿಯಾಗಿ ಹಿರಿಯ ಉಪ ವಿಭಾಗಾಧಿಕಾರಿಯಾಗಿದ್ದ ಶುಭ ಕಲ್ಯಾಣ್ ಅವರು ಅಧಿಕಾರ ಸ್ವೀಕರಿಸಿದ್ದಾರೆ. ಜೂನ್ 25ರ ಅಂದರೆ ನಿನ್ನೆ ಸಂಜೆ ಅಧಿಕಾರ ವಹಿಸಿಕೊಂಡಿದ್ದಾರೆ. ಕೋಲಾರ ಜಿಲ್ಲಾಧಿಕಾರಿ ಜಿ.ಸತ್ಯವತಿಯವರು 45 ದಿನಗಳ ಕಾಲ ರಜೆಯಲ್ಲಿದ್ದು. ಸರ್ಕಾರದ ನಿರ್ದೇಶನದ ಮೇರೆಗೆ ಜೂನ್ 20ರಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಲತಾ ಕುಮಾರಿ ಅವರಿಗೆ ಚಾರ್ಜ್ ಕೊಟ್ಟಿದ್ದರು.

ಆದರೆ, ಪ್ರಭಾರ ಅಧಿಕಾರ ಪಡೆದ ಲತಾ ಕುಮಾರಿಯವರನ್ನು ಕೇವಲ ಐದು ದಿನಗಳಲ್ಲೇ ಬದಲಾವಣೆ ಮಾಡಿ ಉಪ ವಿಭಾಗಾಧಿಕಾರಿ ಶುಭಾ ಕಲ್ಯಾಣ್ ಅವರನ್ನು ಪ್ರಭಾರ ಜಿಲ್ಲಾಧಿಕಾರಿಯಾಗಿ ಆದೇಶ ಹೊರಡಿಸಲಾಗಿದೆ.

ಐಎಎಸ್ ಹಿರಿಯ ಶ್ರೇಣಿಯ ಪ್ರಾಮಾಣಿಕ ಅಧಿಕಾರಿ ಲತಾ ಕುಮಾರಿ ಅವರನ್ನು ಜಿಲ್ಲಾಧಿಕಾರಿ ಸ್ಥಾನದಿಂದ ಬದಲಾಯಿಸಿ ಉಪ ವಿಭಾಗಾಧಿಕಾರಿಗೆ ಆದೇಶ ನೀಡಲಾಗಿದೆ. ಪ್ರಭಾರಿ ಜಿಲ್ಲಾಧಿಕಾರಿ ಲತಾ ಕುಮಾರಿ ಬದಲಾವಣೆ ಹಿಂದೆ ಜಿಲ್ಲೆಯ ಕೆಲವು ಶಾಸಕರ ಕೈವಾಡ ಇದೆ ಎಂಬ ಮಾತುಗಳು ಕೇಳಿಬರುತ್ತಿವೆ.


ಸಂಬಂಧಿತ ಟ್ಯಾಗ್ಗಳು

District Collector Deputy Commissioner ಬದಲಾವಣೆ ಐಎಎಸ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ