ನಿರ್ಮಾಣ ಹಂತದ ಕಟ್ಟಡದ ಮೇಲಿಂದ ಬಿದ್ದು ವ್ಯಕ್ತಿ ಸಾವು !

Kannada News

26-05-2017

ಬೆಂಗಳೂರು:-  ಹೆಚ್‌ಎಸ್‌ಆರ್ ಲೇಔಟ್‌ ನ ನಿರ್ಮಾಣ ಹಂತದ ಕಟ್ಟಡದ ನಾಲ್ಕನೆ ಮಹಡಿಯಿಂದ ಕುಡಿದ ಅಮಲಿನಲ್ಲಿ ಮಲಗಲು ಹೋಗಿದ್ದ  ಗಾರೆ ಕೆಲಸಗಾರನೊಬ್ಬ ಆಯತಪ್ಪಿ ಕೆಳಗೆಬಿದ್ದು ಮೃತಪಟ್ಟಿದ್ದಾನೆ. ಮೃತನನ್ನು ರಾಯಚೂರು ಮೂಲದ ಭೀಮ(೨೫)ಎಂದು ಗುರುತಿಸಲಾಗಿದೆ.ಹೆಚ್‌ಎಸ್‌ಆರ್ ಲೇಔಟ್‌ನ ಒಂದನೇ ಹಂತದ ೨೭ನೇ ಮುಖ್ಯರಸ್ತೆಯ ನಿರ್ಮಾಣ ಹಂತದ ಕಟ್ಟಡದ ಬಳಿ ಶೆಡ್ ಹಾಕಿಕೊಂಡು ವಾಸವಿದ್ದ ಈತ ರಾತ್ರಿ ೧೧ರ ವೇಳೆ ಮದ್ಯಪಾನ ಮಾಡಿ ಕಟ್ಟಡದ ನಾಲ್ಕನೇ ಮಹಡಿಯ ಮೇಲೆ ಮಲಗಲು ಹೋಗಿದ್ದಾನೆ. ನಾಲ್ಕನೇ ಮಹಡಿಗೆ ಬಂದ ಆತ ಅಲ್ಲಿಂದ ಆಯತಪ್ಪಿ ಕೆಳಗೆಬಿದ್ದು ಮೃತಪಟ್ಟಿದ್ದಾನೆ, ನಿರ್ಮಾಣ ಹಂತದ ಕಟ್ಟಡದಲ್ಲೇ ವಾಸಿಸುತ್ತಿದ್ದ ಭೀಮ ಹಾಗೂ ಆತನ ತಂದೆತಾಯಿಯನ್ನು ಕಟ್ಟಡದಿಂದ  ಮಾಲೀಕರು ಹೊರಗೆ ಕಳುಹಿಸಿದ್ದು, ಅವರು ಅದರ ಮುಂಭಾಗವೇ ಶೆಡ್ ಹಾಕಿಕೊಂಡು ವಾಸಿಸುತ್ತಿದ್ದರು. ಇದೀಗ ಪ್ರಕರಣ ದಾಖಲಿಸಿಕೊಂಡಿರುವ ಹೆಚ್‌ಎಸ್‌ಆರ್ ಲೇಔಟ್ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ