ವೈದ್ಯನ ಎಡವಟ್ಟಿನಿಂದ ಬಾಲಕನ ಮರ್ಮಾಂಗವೇ ಕಟ್!

doctor neglect: A boys private part damage

25-06-2018

ಬೀದರ್: ಖಾಸಗಿ ಆಸ್ಪತ್ರೆ ವೈದ್ಯನ ಎಡವಟ್ಟಿನಿಂದ ಬಾಲಕನ ಮರ್ಮಾಂಗವೇ ಕಟ್ ಆಗಿದೆ. ಜಿಲ್ಲೆಯ ಔರಾದ್ ಪಟ್ಟಣದ ಕಾಡೋದೆ ಕ್ಲೀನಿಕ್ ನಲ್ಲಿ, ವೈದ್ಯ ಎಂದು ಹೇಳಿಕೊಳ್ಳುತ್ತಿರುವ ಮಲ್ಲಿಕಾರ್ಜುನ್ ಕಾಡೋದೆ ಎಂಬಾತನಿಂದ ಈ ಕೃತ್ಯ ನಡೆದಿದೆ. ಅನಧಿಕೃತ ಕ್ಲಿನಿಕ್ ಇಟ್ಟಕೊಂಡಿರುವ ಈತ ಬಾಲಕನ ಮರ್ಮಾಂಗ ಶಸ್ತ್ರ ಚಿಕಿತ್ಸೆ ಮಾಡಲು ಹೋಗಿ ಎಡವಟ್ಟು ಮಾಡಿದ್ದಾನೆ.

ಗುಂಡಮ್ಮ ಮತ್ತು ದಶರಥ ಎಂಬ ದಂಪತಿಯ ಎರಡು ವರ್ಷದ ಬಾಲಕನ ಮೇಲೆ ಈ ರೀತಿಯ ಕೃತ್ಯ ನಡೆಸಿದ್ದಾನೆ. ಘಟನೆ ವಿರುದ್ಧ ತೀವ್ರ ಆಕ್ರೋಶಗೊಂಡಿರುವ ಬಾಲಕನ ಕುಟುಂಬಸ್ಥರು ಆಸ್ಪತ್ರೆ ಮುಂದೆ ಗಲಾಟೆ ಮಾಡಿ, ವೈದ್ಯನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗಾಯಾಳು ಬಾಲಕನನ್ನು ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲುಮಾಡಲಾಗಿದೆ.  ಸ್ಥಳಕ್ಕೆ ಔರಾದ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಸ್ಥಿತಿ ತಿಳಿಗೊಳಿಸಿ, ವೈದ್ಯ ಮಲ್ಲಿಕಾರ್ಜುನ ಕಾಡೋದೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

 

 


ಸಂಬಂಧಿತ ಟ್ಯಾಗ್ಗಳು

doctor district hospital ಮರ್ಮಾಂಗ ವಿಚಾರಣೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ