ಸೆಕ್ಯೂರಿಟಿಗಾರ್ಡ್ ನಿಂದ ಲಕ್ಷಾಂತರ ಪಂಗನಾಮ

Security guard robbed worth 30 lakh gold at his owner

25-06-2018

ಬೆಂಗಳೂರು: ಯಲಹಂಕ ಉಪನಗರದಲ್ಲಿ ನಿನ್ನೆ ರಾತ್ರಿ ಊಟ, ಸಂಬಳ, ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಿದ್ದ ಉದ್ಯಮಿಯೊಬ್ಬರ ಮನೆಗೆ ಕನ್ನಹಾಕಿರುವ ನೇಪಾಳ ಮೂಲದ ಐನಾತಿ ಸೆಕ್ಯೂರಿಟಿ ಗಾರ್ಡ್, ನಗದು ಸೇರಿ 30ಲಕ್ಷಕ್ಕೂ ಹೆಚ್ಚು ಮೌಲ್ಯದ ವಸ್ತುಗಳನ್ನು ದೋಚಿ ಪರಾರಿಯಾಗಿದ್ದಾನೆ.

ಯಲಹಂಕ ಉಪನಗರದ ಬಿ ಹಂತದ ಎಲೆಕ್ಟ್ರಿಕಲ್ ಉತ್ಪನ್ನಗಳ ಉದ್ಯಮ ನಡೆಸುತ್ತಿದ್ದ ರಾಜೇಂದ್ರ ಅವರ ಮನೆಯಲ್ಲಿ ಕಳೆದ ಒಂದೂವರೆ ತಿಂಗಳಿನಿಂದ ಕಾವಲಿಗಿದ್ದ ಐನಾತಿ ಸೆಕ್ಯೂರಿಟಿ ಗಾರ್ಡ್ ಮಾಲೀಕರ ಮನೆಯ ಮುಂಬಾಗಿಲು ಮುರಿದು ಒಳನುಗ್ಗಿ 15 ಲಕ್ಷ ನಗದು 250 ಗ್ರಾಂ ಚಿನ್ನಾಭರಣ ಸೇರಿ 30ಲಕ್ಷಕ್ಕೂ ಹೆಚ್ಚು ಮೌಲ್ಯದ ವಸ್ತುಗಳನ್ನು ದೋಚಿ ಪರಾರಿಯಾಗಿದ್ದಾನೆ.

ಮುಂಬಾಗಿಲು ಮುರಿದ ಕಾವಲಿಗಿದ್ದ ಸೆಕ್ಯೂರಿಟಿ ಗಾರ್ಡ್ ಮನೆಯಲ್ಲಿದ್ದ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿ ಸುಮಾರು 15 ಲಕ್ಷ ನಗದು 250 ಗ್ರಾಂ ಚಿನ್ನಾಭರಣ ಇನ್ನಿತರ ವಸ್ತುಗಳನ್ನು ದೋಚಿ ಪರಾರಿಯಾಗಿದ್ದಾನೆ. ರಾಜೇಂದ್ರ ಅವರು ಒಂದೂವರೆ ತಿಂಗಳ ಹಿಂದಷ್ಟೇ ನೇಪಾಳ ಮೂಲದ ಸುಮಾರು 25 ವರ್ಷ ವಯಸ್ಸಿನ ಸೆಕ್ಯೂರಿಟಿ ಗಾರ್ಡ್ ಮನೆಯ ಕಾವಲಿಗೆ ನೇಮಿಸಿಕೊಂಡಿದ್ದು ಆತನ ಬಗ್ಗೆ ಹೆಚ್ಚಿನ ಮಾಹಿತಿ ಸಂಗ್ರಹಿಸಿರಲಿಲ್ಲ.

ಹಗಲಿರುಳೆನ್ನದೇ ಕೆಲಸ ಮಾಡುತ್ತಿದ್ದ ಆತನಿಗೆ ಮನೆಯ ಆವರಣದ ಶೆಡ್‍ನಲ್ಲಿಯೇ ಉಳಿದುಕೊಳ್ಳಲು ಅವಕಾಶ ಮಾಡಿಕೊಡಲಾಗಿತ್ತು. ನಂಬಿಕಸ್ಥನಂತೆ ಇದ್ದ ಆತ ನಿನ್ನೆ ರಾಜೇಂದ್ರ ಅವರು ಕುಟುಂಬ ಸಮೇತ ಹೊರ ಹೋಗಿದ್ದಾಗ ಕೃತ್ಯವೆಸಗಿ ಪರಾರಿಯಾಗಿದ್ದಾನೆ.

ಘಟನೆ ನಡೆದ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿರುವ ಯಲಹಂಕ ಉಪನಗರ ಪೊಲೀಸರು ಆರೋಪಿಗಾಗಿ ರೈಲು ನಿಲ್ದಾಣ ಬಸ್ ನಿಲ್ದಾಣ ಇನ್ನಿತರ ಕಡೆ ಶೋಧ ನಡೆಸಿದ್ದಾರೆ ಆರೋಪಿಯು ರಾತ್ರಿಯೇ ನೇಪಾಳದತ್ತ ಪರಾರಿಯಾಗಿರುವ ಶಂಕೆಯಿದ್ದು ಪತ್ತೆ ಕಾರ್ಯಕ್ಕೆ ವಿಶೇಷ ತಂಡ ರಚಿಸಲಾಗಿದೆ ಎಂದು ಡಿಸಿಪಿ ಕಲಾ ಕೃಷ್ಣಸ್ವಾಮಿ ತಿಳಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Robbery Payment ಎಲೆಕ್ಟ್ರಿಕಲ್ ಸೆಕ್ಯೂರಿಟಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ