ಮಚ್ಚು ಹಿಡಿದು ದಾಂಧಲೆ: ಯುವಕನ ಬಂಧನ

gang war: one arrested at nelamangala

25-06-2018

ಬೆಂಗಳೂರು: ಕುಡಿದ ಮತ್ತಿನಲ್ಲಿದ್ದ ಯುವಕರ ಕ್ಷುಲಕ ವಿಚಾರಕ್ಕೆ ನಡೆದ ಜಗಳದಲ್ಲಿ ಮಚ್ಚು ಹಿಡಿದು ದಾಂಧಲೆ ನಡೆಸಿದ ದುಷ್ಕರ್ಮಿಯನ್ನು ಪೊಲೀಸರು ಬಂಧಿಸಿದ್ದಾರೆ.

ನೆಲಮಂಗಲದ ಚಿಕ್ಕಮಾರನಹಳ್ಳಿಯಲ್ಲಿ ನಿನ್ನೆ ರಾತ್ರಿ ಕುಡಿದ ಮತ್ತಿನಲ್ಲಿ ಸುರೇಶ್ ಹಾಗೂ ಲಕ್ಷ್ಮಿನಾರಾಯಣ್ ನಡುವೆ ಮಾತಿಗೆ ಮಾತು ಬೆಳೆದು ಜಗಳ ಉಂಟಾಗಿದೆ. ಜಗಳವಾಡುತ್ತಿದ್ದ ಇಬ್ಬರಿಗೂ ಸ್ಥಳೀಯರು ಬೈದು ಬುದ್ಧಿ ಹೇಳಿದ ನಂತರ ಸುರೇಶ್ ಮನೆಗೆ ಹೋಗಿದ್ದಾನೆ. ಸ್ವಲ್ಪ ಸಮಯದ ನಂತರ ಆತನನ್ನು ಹಿಂಬಾಲಿಸಿದ ಲಕ್ಷ್ಮಿನಾರಾಯಣ್ ಮಚ್ಚು ಹಿಡಿದು ಸುರೇಶ್‍ನ ಮನೆ ಬಾಗಿಲು ಮುರಿದಿದ್ದಾನೆ.

ಈ ವೇಳೆ ಗ್ರಾಮದಲ್ಲಿ ಲಕ್ಷ್ಮಿನಾರಾಯಣನ ರಂಪಾಟಕ್ಕೆ, ಗ್ರಾಮಸ್ಥರು ಕೆಲಕಾಲ ಭಯಭೀತರಾಗಿದ್ದರು. ನೆಲಮಂಗಲ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಧಾವಿಸಿ ಪ್ರಕರಣ ದಾಖಲಿಸಿಕೊಂಡು, ದಾಂಧಲೆ ಮಾಡಿದ ಲಕ್ಷ್ಮಿನಾರಾಯಣನನ್ನು ಬಂಧಿಸಿದ್ದಾರೆ.

 


ಸಂಬಂಧಿತ ಟ್ಯಾಗ್ಗಳು

arrested weapons ದಾಂಧಲೆ ಮತ್ತಿನಲ್ಲಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ