ರೆಸಿಡೆನ್ಸಿ ರಸ್ತೆಯಲ್ಲಿ 2 ಯುವತಿಯರಿಂದ ನಡೆದಿದ್ದೇನು ಗೊತ್ತಾ?

2 young girls Robbed a man at residency road

25-06-2018

ಬೆಂಗಳೂರು: ನಗರದಲ್ಲಿ ಯುವತಿಯರು ಲೂಟಿಗಿಳಿದಿರುವ ಕೃತ್ಯ ಬೆಳಕಿಗೆ ಬಂದಿದ್ದು ಆತಂಕಕ್ಕೆ ಕಾರಣವಾಗಿದೆ. ಆಶೋಕನಗರದ ರೆಸಿಡೆನ್ಸಿ ರಸ್ತೆಯ ಚುನ್ ಲಂಗ್ ಹೊಟೇಲ್ ಬಳಿ ವಿಳಾಸ ಕೇಳುವ ನೆಪದಲ್ಲಿ ನಿನ್ನೆ ರಾತ್ರಿ ಯುವಕನ ಪ್ರಜ್ಞೆ ತಪ್ಪಿಸಿದ ಐನಾತಿ ಯುವತಿಯರಿಬ್ಬರು ಚಿನ್ನದ ಸರ, ಪರ್ಸ್ ಸುಲಿಗೆ ಮಾಡಿ ಪರಾರಿಯಾಗಿದ್ದಾರೆ.

ಬ್ರಿಗೇಡ್ ರಸ್ತೆಯಲ್ಲಿರುವ ಚುನ್ ಲಂಗ್ ರೆಸ್ಟೋರೆಂಟ್‍ನಲ್ಲಿ ಪಾರ್ಟಿ ಮುಗಿಸಿ ಹೊರ ಬಂದ ಖಾಸಗಿ ಕಂಪನಿ ಉದ್ಯೋಗಿ ಗೌರವ್ ನೇಗಿಯನ್ನು ಇಬ್ಬರು ಯುವತಿಯರು ಮಾತನಾಡಿಸಿದ್ದಾರೆ. ನಂತರ ಸಪ್ನ ಬುಕ್ ಹೌಸ್ ವಿಳಾಸ ಕೇಳಿದ್ದಾರೆ. ಈ ವೇಳೆ ಕರ್ಚೀಫ್‍ನ್ನು ಯುವತಿಯರು ಆತನ ಮುಖಕ್ಕೆ ಒತ್ತಿ ಪ್ರಜ್ಞೆ ತಪ್ಪಿಸಿದ್ದಾರೆ. ಬಳಿಕ ಆತನ ಬಳಿಯಿದ್ದ ಚಿನ್ನದ ಸರ, ಮೊಬೈಲ್ ಮತ್ತು ಪರ್ಸ್ ಕಿತ್ತುಕೊಂಡು ಪರಾರಿಯಾಗಿದ್ದಾರೆ.

ರಸ್ತೆಯಲ್ಲಿ ಪ್ರಜ್ಞೆ ತಪ್ಪಿ ಬಿದ್ದಿದ್ದ ಗೌರವ್ ನೇಗಿಯನ್ನು ನೋಡಿದ ಸ್ನೇಹಿತರು ಆತನನ್ನು ಉಪಚರಿಸಿ ಎಚ್ಚರಿಸಿದಾಗ ಘಟನೆ ಬಳಿಕಿಗೆ ಬಂದಿದೆ. ಕ್ಲೋರೋಫಾರಮ್ ಹಾಕಿದ್ದ ಕರ್ಚೀಫಿನಿಂದ ಮುಖಕ್ಕೆ ಒತ್ತಿ ಖತರ್ನಾಕ್ ಯುವತಿಯರಿಬ್ಬರು ಈ ಕೃತ್ಯ ನಡೆಸಿದ್ದಾರೆ. ಘಟನೆ ಸಂಬಂಧ ಅಶೋಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಯುವತಿಯರೂ ಕೂಡ ಸುಲಿಗೆಗಿಳಿದಿರುವ ಆತಂಕಕಾರಿ ಕೃತ್ಯ ಇದಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

 

 

 


ಸಂಬಂಧಿತ ಟ್ಯಾಗ್ಗಳು

residency road Party ಯುವತಿ ಮೊಬೈಲ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ