ವೋಲ್ವೋ ಪ್ರಯಾಣಿಕರಿಗೆ ಬಿಎಂಟಿಸಿ ಶಾಕ್..!

volvo buses ticket price may hike?

25-06-2018

ಬೆಂಗಳೂರು: ಜುಲೈ 1ರಿಂದ ವೋಲ್ವೋ ಬಸ್ ಪ್ರಯಾಣ ದುಬಾರಿಯಾಗುವ ಸಾಧ್ಯತೆಗಳಿವೆ. 700 ಐಷಾರಾಮಿ ಬಸ್ ಗಳ ಪ್ರಯಾಣ ದರ ಶೇ.37ರಷ್ಟು ಹೆಚ್ಚಳವಾಗುವ ಸಾಧ್ಯತೆಗಳಿವೆ. ಪ್ರಯಾಣಿಕರ ಆಕರ್ಷಣೆಗೆ ಕಳೆದ ಜನವರಿ 1ರಿಂದ ಶೇ.37ರಷ್ಟು ದರ ಇಳಿಕೆ ಮಾಡಲಾಗಿತ್ತು. ಆದರೆ, ಪ್ರಯಾಣಿಕರಿಂದ ಉತ್ತಮ ರೆಸ್ಪಾನ್ಸ್ ಸಿಗದ ಕಾರಣ ಯಥಾಸ್ಥಿತಿ ದರ ಮುಂದುವರಿಕೆಗೆ ಚಿಂತನೆ ನಡೆಸಲಾಗಿದ್ದು, ಸಾರಿಗೆ ಸಚಿವರೂ ಸಹ ದರ ಹೆಚ್ಚಳಕ್ಕೆ ಸಹಮತ ವ್ಯಕ್ತಪಡಿಸಿದ್ದಾರೆ ತಿಳಿದು ಬಂದಿದೆ.

ದರ ಇಳಿಕೆ ಮಾಡಿದ್ದರೂ ವೋಲ್ವೋ ಬಸ್ ಗಳು ಖಾಲಿ ಖಾಲಿ ಸಂಚರಿಸುತ್ತಿದ್ದು ಅಷ್ಟೇನು ಪ್ರಯಾಣಿಕರನ್ನು ಆಕರ್ಷಿಸಿಲ್ಲ. ಇದರ ನಡುವೆ ದರ ಹೆಚ್ಚಳ ಮಾಡಿದರೆ ವೋಲ್ವೋ ಬಸ್ ಗಳಿಂದ ಇಲಾಖೆಗೆ ಮತ್ತಷ್ಟು ನಷ್ಟ ಆಗಲಿದೆ. ಆದರೂ ದರ ಹೆಚ್ಚಳಕ್ಕೆ ಮುಂದಾಗಿದೆ ಬಿಎಂಟಿಸಿ.

ಒಂದೆಡೆ ಡೀಸೆಲ್ ದರ ಹೆಚ್ಚಳವಾಗಿದ್ದು, ಟಿಕೆಟ್ ಇಳಿಕೆಯಿಂದ ನಿಗಮಕ್ಕೆ ಕೋಟಿ ಕೋಟಿ ನಷ್ಟವಾಗುತ್ತಿದೆ. ಟಿಕೆಟ್ ಇಳಿಕೆಯಿಂದ ಕಳೆದ ಆರು ತಿಂಗಳಲ್ಲಿ 10 ಕೋಟಿ ಗಿಂತ ಹೆಚ್ಚು ನಷ್ಟ ಅನುಭವಿಸಿದ್ದು, ನಷ್ಟ ಸರಿದೂಗಿಸಲು ಬಿಎಂಟಿಸಿ ಪ್ರಯಾಣಿಕರ ಮೇಲೆ ಹೆಚ್ಚಿನ ಹೊರೆ ಹಾಕಲು ಮುಂದಾಗಿದೆ.

ಇದೇ ವೇಳೆ ವೋಲ್ವೋ ಬಸ್ ದರ ಮಾತ್ರ ಹೆಚ್ಚಳವಾಗುವ ಸಾಧ್ಯತೆಗಳಿದ್ದು, ಸಾಮಾನ್ಯ ಬಸ್ ಟಿಕೆಟ್ ದರ ಯಥಾಸ್ಥಿತಿ ಇರಲಿದೆ ಎಂದು ಬಿಎಂಟಿಸಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.


ಸಂಬಂಧಿತ ಟ್ಯಾಗ್ಗಳು

volvo bus BMTC ಟಿಕೆಟ್ ಪ್ರಯಾಣಿಕ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ