ವೈದ್ಯರಿಗೆ ರೇವಣ್ಣ ಎಚ್ಚರಿಕೆ

Hassan district hospital: H.D.Revanna warning to doctors

25-06-2018

ಹಾಸನ: ಹಾಸನ ಜಿಲ್ಲಾಸ್ಪತ್ರೆ ಹಾಗೂ ವೈದ್ಯಕೀಯ ಕಾಲೇಜಿಗೆ ಭೇಟಿ ನೀಡಿದ ಸಚಿವ ರೇವಣ್ಣ, ಬಡ ರೋಗಿಗಳಿಗೆ ಗುಣ ಮಟ್ಟದ ಚಿಕಿತ್ಸೆ ನೀಡಬೇಕು, ಕರ್ತವ್ಯ ಲೋಪ ಎಸಗುವ ವೈದ್ಯರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ. 135 ಕೋಟಿ ರೂ. ವೆಚ್ಚದಲ್ಲಿ ತಲಾ 600 ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಹಾಸ್ಟೆಲ್ ಸೌಲಭ್ಯ, ಪಿಜಿ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಫ್ಯಾಮಿಲಿ ಬ್ಲಾಕ್ ನಿರ್ಮಿಸಲು‌ ಚಿಂತನೆ ನಡೆಸಲಾಗಿದೆ. ಹೆರಿಗೆಗೆ ಬಂದ‌ ಮಹಿಳೆಯರನ್ನು ಖಾಸಗಿ ಆಸ್ಪತ್ರೆಗೆ ಕಳುಹಿಸಿದಂತೆ ತಾಕೀತು ಮಾಡಲಾಗಿದೆ ಎಂದು ರೇವಣ್ಣ ತಿಳಿಸಿದರು.

ಸೂಪರ್ ಸ್ಪೆಷಾಲಿಟಿ ಅಥವಾ ಖಾಸಗಿ ಆಸ್ಪತ್ರೆಗೆ ರೋಗಿಯನ್ನು ಕಳುಹಿಸಿದರೆ ಯಾವ ಕಾರಣಕ್ಕೆ ಎಂದು ನಮೂದಿಸಬೇಕು ಎಂದು ರೇವಣ್ಣ ಸೂಚನೆ ನೀಡಿದರು. ಬಜೆಟ್ ನಲ್ಲಿ ಎಷ್ಟು ಹಣ ಮೀಸಲಿಡುತ್ತಾರೆ ಎಂಬುದನ್ನು ಗಮನಿಸಿ ಪ್ರತ್ಯೇಕ ಹೆರಿಗೆ ಹಾಗೂ ಮಕ್ಕಳ‌ ಆಸ್ಪತ್ರೆ ನಿರ್ಮಾಣ ಮಾಡಲಾಗುವುದು. ಆರ್.ಟಿ.ಒ ಅಧಿಕಾರಿಗಳು ಜನರಿಗೆ ತೊಂದರೆ ನೀಡಿದರೆ ಜೈಲಿಗೆ ಕಳುಸುವೆ. ಈಗಾಗಲೇ ಅಂಥವರ ಬಗ್ಗೆ ಮಾಹಿತಿ ಇದೆ. ಎಸಿಬಿ ಅಧಿಕಾರಿಗಳು ಚುರುಕಿನಿಂದ ಕರ್ತವ್ಯ ನಿರ್ವಹಿಸಬೇಕು ಎಂದು ಹೆಚ್.ಡಿ.ರೇವಣ್ಣ ತಿಳಿಸಿದರು.


ಸಂಬಂಧಿತ ಟ್ಯಾಗ್ಗಳು

H.D.Revanna R.T.O ರೋಗಿ ಹೆರಿಗೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ