ದುಷ್ಕರ್ಮಿಗಳಿಂದ ವೈದ್ಯನ ಮೇಲೆ ಹಲ್ಲೆ-ದರೋಡೆ

Assault on doctor at channapatna

25-06-2018

ಬೆಂಗಳೂರು: ಚನ್ನಪಟ್ಟಣದಲ್ಲಿನ ವೈದ್ಯರೊಬ್ಬರ ಮನೆಗೆ ನುಗ್ಗಿರುವ ದುಷ್ಕರ್ಮಿಗಳು ವೈದ್ಯರ ಮೇಲೆ ಹಲ್ಲೆ ನಡೆಸಿ ಮಾರಕಾಸ್ತ್ರಗಳನ್ನು ತೋರಿಸಿ ಬೆದರಿಸಿ ಮನೆಯಲ್ಲಿದ್ದ ಹಣ, ಚಿನ್ನಾಭರಣಗಳನ್ನು ದೋಚಿ  ಪರಾರಿಯಾಗಿದ್ದಾರೆ.

ಚನ್ನಪಟ್ಟಣದ ಡಾ.ರಾಜಣ್ಣ ಅವರ ಮನೆಗೆ ರಾತ್ರಿ ನುಗ್ಗಿರುವ ಐವರು ದುಷ್ಕರ್ಮಿಗಳು ನಗ ನಾಣ್ಯ ದೋಚಲು ಮುಂದಾಗಿದ್ದು, ಎಚ್ಚರಗೊಂಡ ರಾಜಣ್ಣ ಅವರು ರಕ್ಷಣೆಗಾಗಿ ಕೂಗಿಕೊಂಡು, ಪ್ರತಿರೋಧ ತೋರಿದಾಗ ಹಲ್ಲೆ ನಡೆಸಿ ಬಾಯಿ ಮುಚ್ಚಿಸಿ, ಮಾರಕಾಸ್ತ್ರಗಳನ್ನು ತೋರಿಸಿ ಬೆದರಿಸಿದ್ದಾರೆ.

ಕಳ್ಳರಿಗೆ ಹೆದರಿ ವೈದ್ಯರು 1 ಲಕ್ಷದ 50 ಸಾವಿರ ಹಣ ನೀಡಿ ಒಡವೆ ಕೊಡಲು ನಿರಕರಿಸಿದಾಗ ಹಣೆಗೆ ಹೊಡೆದು ವೈದ್ಯನ ಮೇಲೆ ಮತ್ತೆ ಹಲ್ಲೆ ಮಾಡಿ ಕಸಿದು ಪರಾರಿಯಾಗಿದ್ದಾರೆ. ದುಷ್ಕರ್ಮಿಗಳಿಂದ ಹಲ್ಲೆಗೊಳಗಾದ ವೈದ್ಯ, ಹತ್ತಿರದ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದಾರೆ. ತಕ್ಷಣವೇ ಚನ್ನಪಟ್ಟಣಪುರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ವೈದ್ಯ ರಾಜಣ್ಣ ಅವರನ್ನು ಚನ್ನಪಟ್ಟಣದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Doctor Robbery ಮಾರಕಾಸ್ತ್ರ ಆಸ್ಪತ್ರೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ