ಅಗರಬತ್ತಿ ಕಾರ್ಖಾನೆ ಬೆಂಕಿಗಾಹುತಿ: ಕೋಟ್ಯಾಂತರ ನಷ್ಟ

Fire in a Agarbatti factory: crores worth products loss

22-06-2018

ಬೆಂಗಳೂರು: ಅಗರಬತ್ತಿ ಕಾರ್ಖಾನೆಯೊಂದಕ್ಕೆ ಆಕಸ್ಮಿಕ ಬೆಂಕಿ ತಗುಲಿ ಕೋಟ್ಯಾಂತರ ನಷ್ಟ ಸಂಭವಿಸಿರುವ ದುರ್ಘಟನೆ ಕೆ.ಪಿ.ಅಗ್ರಹಾರದಲ್ಲಿ ಇಂದು ಮುಂಜಾನೆ ನಡೆದಿದೆ. ಕೆಪಿ ಅಗ್ರಹಾರದ 5ನೇ ಮುಖ್ಯರಸ್ತೆಯ ಮೀನಾ ಅಗರಬತ್ತಿ ಕಾರ್ಖಾನೆಗೆ ಮುಂಜಾನೆ 5ರ ವೇಳೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ  ಬೆಂಕಿ ತಗುಲಿದೆ. ಅಗರಬತ್ತಿಗಳೇ ಕಾರ್ಖಾನೆಯಲ್ಲಿ ತುಂಬಿದ್ದರಿಂದ ಕ್ಷಣ ಮಾತ್ರದಲ್ಲಿ ಬೆಂಕಿಯು ಇಡೀ ಕಾರ್ಖಾನೆ ವ್ಯಾಪಿಸಿ ದಟ್ಟ ಹೊಗೆ ಕಾಣಿಸಿಕೊಂಡಿದೆ.

ಇದನ್ನು ನೋಡಿ ಆತಂಕಗೊಂಡ ಒಳಗಿದ್ದ ಮೂವರು ನೌಕರರು ಎಚ್ಚರಗೊಂಡು ಹೊರ ಓಡಿಬಂದಿದ್ದು ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಸುದ್ದಿ ತಿಳಿದ ತಕ್ಷಣ ಅಗ್ನಿ ಶಾಮಕ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ ಬೆಂಕಿಯ ಕೆನ್ನಾಲಗೆ ಅಕ್ಕ ಪಕ್ಕದ ಕಟ್ಟಡಗಳಿಗೆ ವ್ಯಾಪಿಸುವ ಮೊದಲೇ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಷ್ಟರಲ್ಲಿ ಅಗರಬತ್ತಿ ಫ್ಯಾಕ್ಟರಿಯಲ್ಲಿದ್ದ ಎಲ್ಲ ವಸ್ತುಗಳೂ ಬೆಂಕಿಗಾಹುತಿಯಾಗಿದ್ದವು. ಅಗರಬತ್ತಿ ಫ್ಯಾಕ್ಟರಿಯಲ್ಲಿ ಅಗ್ನಿಶಾಮಕ ಮಾರ್ಗಸೂಚಿಗಳನ್ನು ಅನುಸರಿಸದೇ ಇರುವುದು ಬೆಂಕಿ ಅನಾಹುತಕ್ಕೆ ಕಾರಣವಾಗಿದೆ ಕೆಪಿ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಸಂಬಂಧಿತ ಟ್ಯಾಗ್ಗಳು

Agarbathi short circuit ಕಾರ್ಖಾನೆ ಅದೃಷ್ಟವಶಾತ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ