‘ಕಾಗಕ್ಕ ಗುಬ್ಬಕ್ಕ ಕಥೆ ಹೇಳುತ್ತಲೇ ಇದ್ದೀರಿ’: ಬಿಡಿಎ ಅಧಿಕಾರಿಗೆ ತರಾಟೆ

huge protest in front of BDA office gunjur bengaluru

22-06-2018

ಬೆಂಗಳೂರು: ಬಿಡಿಎ ವಿರುದ್ಧ ಪ್ರತಿಭಟನೆಗಿಳಿದ ವಸತಿ ಸಮುಚ್ಚಯ ಪಡೆದ ಫಲಾನುಭವಿಗಳು, ವಸತಿ ಸಮುಚ್ಚಯ ವಿಭಾಗದ ಮುಖ್ಯಸ್ಥ ಗೌಡಯ್ಯರನ್ನ ತರಾಟೆಗೆ ತೆಗೆದುಕೊಂಡು ಪ್ರತಿಭಟನೆ ನಡೆಸಿದ್ದಾರೆ. ನಗರದ ಹೊರವಲಯದ ಗುಂಜೂರು ಬಳಿ ಇರುವ ಬಿಡಿಎ ಕಚೇರಿ ಮುಂದೆ ನೂರಾರು ಮಂದಿ ಫಲಾನುಭವಿಗಳು ಪ್ರತಿಭಟಿಸಿದ್ದಾರೆ.

‘4ವರ್ಷವಾದ್ರು ನಮ್ಮ ಫ್ಲಾಟ್ ನಮಗೆ ಯಾಕೆ ಬಿಟ್ಟು ಕೊಡುತ್ತಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಮ್ಮ ಬಳಿಯಿಂದ ಹಣ ಪಡೆದುಕೊಂಡಿರಿ ಆದರೆ ಫ್ಲಾಟ್ ಯಾಕೆ ಕೊಡುತ್ತಿಲ್ಲ, ಫ್ಲಾಟ್ ಗಳಿಗೆ ಮೂಲಭೂತ ಸೌಕರ್ಯಗಳಿಲ್ಲ ಇನ್ನು ಯಾವಾಗ ಹಂಚಿಕೆ ಮಾಡುತ್ತಿರಾ ಎಂದು ಪ್ರಶ್ನಿಸಿದ್ದಾರೆ. 4ವರ್ಷದಿಂದ ಕಾಗೆ ಗುಬ್ಬಕ್ಕನ ಕಥೆ ಹೇಳುತ್ತಲೇ ಇದ್ದೀರ’ ಗೌಡಯ್ಯ ನೀವೂ ನಮಗೆ ಬರೀ ಸುಳ್ಳುಗಳನ್ನು ಹೇಳಬೇಡಿ ಎಂದು ಮುಖಕ್ಕೆ ಹೊಡದಂತೆ ಹೇಳಿ' ತಮ್ಮ ಆಕ್ರೋಶ ಹೊರಹಾಕಿದ್ದಾರೆ.

ಸುಮಾರು 400 ಮಂದಿಗೆ ಫ್ಲಾಟ್ ಕೊಡಬೇಕು, ಅವರೆಲ್ಲ ಈಗ 4ವರ್ಷದಿಂದ ಫ್ಲಾಟ್ ಗಾಗಿ ಅಲೆದು ಸಾಕಾಗಿದೆ. ಆದ್ದರಿಂದಲೇ ಗೌಡಯ್ಯರನ್ನ ತರಾಟೆಗೆ ತೆಗೆದುಕೊಂಡಿದ್ದಾರೆ. ಗೌಡಯ್ಯರ ಬೇಜವಾಬ್ದಾರಿಯಿಂದಲೇ ಈ ಸಮಸ್ಯೆ ಎಂದು ದೂರಿದ್ದಾರೆ.


ಸಂಬಂಧಿತ ಟ್ಯಾಗ್ಗಳು

BDA Flats ಬೇಜವಾಬ್ದಾರಿ ಸೌಕರ್ಯ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ